ಚಿತ್ರದುರ್ಗ;
ಪುಸ್ತಕ ಪ್ರಕಟಣೆ ಎನ್ನುವುದನ್ನು ಕೆಲವೊಂದು ಜನ ಲಾಭದಾಯಕ ಉದ್ಯಮವಾಗಿ ಮಾಡಿಕೊಂಡಿದ್ದಾರೆ, ಅವಡಿu ಪ್ರಕಟ ಮಾಡಿದ ಪುಸ್ತಕಗಳು ಗ್ರಂಥಾಲಯ ಬಿಟ್ಟರೆ ಬೇರೆ ಕಡೆ ಸಿಗುವುದಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ವಿಷಾಧಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದವತಿಯಿಂದ ನಗರದ ರೀಟಾಕೌಂಟ್ಸ್ ಅವರ ಮನೆಯಂಗಳದಲ್ಲಿ ಏರ್ಪಡಿಸಲಾಗಿದ್ದ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮುಂಚೆ ಎಲ್ಲಾ ಪುಸ್ತಕಗಳನ್ನು ಮುದ್ರಣ ಮಾಡಲು ಲೇಖಕರು ಆಸಕ್ತಿಯಿಂದ ಮುಂದೆ ಬರುತ್ತಿದ್ದರು ಅದರಂತೆ ಓದುಗರ ಸಹಾ ಕಾದಿದ್ದು ಪುಸ್ತಕಗಳನ್ನು ಮುಗಿ ಬಿದ್ದು ಖರೀದಿ ಮಾಡುತ್ತಿದ್ದರು ಆದರೆ ಇಂದು ಪುಸ್ತಕ ಪ್ರಕಟಣೆ ಎನ್ನುವುದು ಸಾಹಿತ್ಯದ ಕೃಷಿಯಾಗದೆ ಅದನ್ನು ಸಹಾ ಲಾಭದಾಯಕವಾದ ಉದ್ಯಮವಾಗಿ ಮಾಡಲಾಗುತ್ತಿದೆ ಎಂದರು.
ಕೆಲವೊಂದು ಪ್ರಕಾಶಕರಾಗಲಿ ಅಥವಾ ಲೇಖಕರಾಗಲಿ ತಮ್ಮ ಕೃತಿಗಳನ್ನು ಮುದ್ರಣ ಮಾಡಿ ಸರ್ಕಾರದಿಂದ ಬರುವ ಸಹಾಯವನ್ನು ಪಡೆದು ಸುಮ್ಮನಾಗುತ್ತಾರೆ ಆ ಕೃತಿಗಳನ್ನು ಬೇರೆ ಕಡೆಗೆ ಕಳುಹಿಸುವುದಿಲ್ಲ ಅಲ್ಲದೆ ಮಾರಾಟವನ್ನು ಸಹಾ ಮಾಡಲು ನೀಡುವುದಿಲ್ಲ ಇದರಿಂದ ಪ್ರಾಧಿಕಾರವೇ ಪುಸ್ತಕಗಳನ್ನು ಅವರಿಂದ ಖರೀದಿ ಮಾಡಿ ನಮ್ಮ ಮಳಿಗೆಗಳಿಗೆ ಕಳುಹಿಸುವುದರ ಮೂಲಕ ಓದುಗರಿಗೆ ಸಿಗುವಂತೆ ಮಾಡಲಾಗುತ್ತಿದೆ ಎಂದು ಭೂಪತಿ ತಿಳಿಸಿದರು.
ಪ್ರಾಧಿಕಾರ ಲೇಖಕ, ಪ್ರಕಾಶಕ ಮತ್ತು ಓದುಗರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ, ಹೂಸ ಲೇಖಕರಿಗೆ ಮತ್ತು ಯುವ ಸಾಹಿತಿಗಳಿಗೆ ಅವರು ಬರೆದ ಕೃತಿಗಳನ್ನು ಪ್ರಕಟ ಮಾಡಲು ಯಾವ ಪ್ರಕಾಶಕರು ಮುಂದೆ ಬಾರದಿದ್ದಾಗ ಅಂತಹ ಕೃತಿಗಳನ್ನು ಪ್ರಾಧಿಕಾರ ಮುದ್ರಿಸುವುದು ಮಾತ್ರವಲ್ಲದೆ ಅವುಗಳನ್ನು ಮಾರಾಟ ಮಾಡಲು ಸಹಾ ಸಹಾಯ ಮಾಡಲಿದೆ. ಸರ್ಕಾರದಿಂದ ಸುಮಾರು 1 ಕೋಟಿ ಅನುದಾನ ಬರಲಿದ್ದು ಅದರಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ನೆರವಾಗುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
35 ರಿಂದ 40 ವರ್ಷದೊಳಗಿನ ಲೇಖಕರಿಗೆ ಪ್ರಾಧಿಕಾರ 30 ಜನರಿಗೆ ಸುಮಾರು 15 ಸಾವಿರ ಪ್ರೋತ್ಸಾಹಧನ ನೀಡುವುದರ ಮೂಲಕ ಅವರ ಕೃತಿಯನ್ನು ಪ್ರಕಟ ಮಾಡಲು ನೆರವಾಗುತ್ತಿದೆ ಈ ವರ್ಷ ಪ್ರಾಧಿಕಾರದ ಬೆಳ್ಳಿ ಹಬ್ಬವಾಗಿರುವುದರಿಂದ 50 ಜನರಿಗೆ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿ, ಇದ್ದಲ್ಲದೆ ದಲಿತರಿಗೆ ಸುಮಾರು 200 ಪುಟಗಳ ಕೃತಿಯನ್ನು ಪ್ರಕಟ ಮಾಡಲು 35,000 ರೂ.ಗಳನ್ನು ಪ್ರೋತ್ಸಾಹ ನೀಡಲಾಗುವುದು. ಜನತೆಯಲ್ಲಿ ಪುಸ್ತಕವನ್ನು ಓದುವ ಪ್ರವೃತ್ತಿಯನ್ನು ಬೆಳಸುವ ಸಲುವಾಗಿ ರಾಜ್ಯದ ವಿವಿಧೆಡೆಗಳಲ್ಲಿ ಪುಸ್ತಕ ಮೇಳವನ್ನು ನಡೆಸಲಾಗುತ್ತದೆ ಇದರೊಂದಿಗೆ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮವನ್ನು ಸಹಾ ನಡೆಸಲಾಗುತ್ತಿದು ಇದುವರೆವಿಗೂ ರಾಜ್ಯದ ವಿವಿಧೆಡೆಗಳಲ್ಲಿ 10 ಕಾರ್ಯಕ್ರಮ ಗಳನ್ನು ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಪ್ರಾಧಿಕಾರ ಬರೀ ಮನೆಗಳಲ್ಲಿ ಮಾತ್ರವೇ ಇಂತಹ ಕಾರ್ಯಕ್ರಮಗಳನ್ನು ಮಾಡದೇ ಜೈಲಿನಲ್ಲಿಯೂ ಸಹಾ ಒಂದು ಕಾರ್ಯಕ್ರಮ ಮಾಡಿದ್ದು ಇದರಿಂದ ಅಲ್ಲಿನ ಖೈದಿಗಳು ಪುಸ್ತಕವನ್ನು ಓದುವ ಅಭ್ಯಾಸವನ್ನು ಬೆಳಸಿಕೊಂಡಿದ್ದಲ್ಲದೆ ಅಲ್ಲಿನ ಗ್ರಂಥಾಲಯದಲ್ಲಿ ಇಂತಹ ಪುಸ್ತಕಗಳನ್ನು ಕಳುಹಿಸಿ ಎಂದು ಕೇಳುವ ಹಂತಕ್ಕೆ ಬಂದಿದ್ದಾರೆ ಎಂದು ತಿಳಿಸಿ, ಪ್ರಾಧಿಕಾರದಿಂದ ಮಳಿಗೆಯನ್ನು ಪ್ರಾರಂಭಿಸಿ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕವನ್ನು ಮಾರಾಟ ಮಾಡಲಾಗುತ್ತಿದೆ. ಇದ್ದಲ್ಲದೆ ಮಳಿಗೆಯನ್ನು ಪ್ರಾರಂಭ ಮಾಡುವವರಿಗೆ 5000 ರೂ.ಗಳ ಸಹಾಯಧನ ನೀಡಲಾಗುತ್ತದೆ. ಪ್ರಾಧಿಕಾರ ಈ ವರ್ಷದಲ್ಲಿ 562 ಕೃತಿಗಳನ್ನು ಪ್ರಕಟ ಮಾಡಿದ್ದರು ಸಹಾ ಅದರಲ್ಲಿ ಮಾರಾಟಕ್ಕೆ ಲಭ್ಯವಾಗಿರುವುದು ಕೇವಲ 362 ಕೃತಿಗಳು ಮಾತ್ರ ಎಂದು ಹೇಳಿದರು.
ಬೇರೆ ವಸ್ತುಗಳ ಆನ್‍ಲೈನ್ ಖರೀದಿಯಂತೆ ಪ್ರಾಧಿಕಾರವೂ ಸಹಾ ಆನ್‍ಲೈನ್ ಖರೀದಿಯನ್ನು ಪ್ರಾರಂಭ ಮಾಡಿದೆ, ಇದರಲ್ಲಿ ಈಗಾಗಲೇ 89 ಸಾವಿರ ರೂ.ಗಳ ವಹಿವಾಟು ನಡೆಸಿದೆ ಇದರಲ್ಲಿ ಒಬ್ಬ ಓದುಗ 14500 ರೂ.ಗಳ ಪುಸ್ತಕವನ್ನು ಖರೀದಿ ಮಾಡಿದ್ದಾರೆ, ಮಾರಾಟ ಮಳಿಗೆಯಲ್ಲಿ ಸುಮಾರು 6 ಲಕ್ಷ ರೂ.ಗಳ ವಹಿವಾಟು ನಡೆಸಲಾಗಿದೆ ಎಂದು ಅಧ್ಯಕ್ಷ ವಸುಂಧರ ಭೂಪತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕಿ ರೀಟಾಕೌಂಟ್ಸ್. ಹರಿಹರದ ಸಾಹಿತಿ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ದೊಡ್ಡಮಲ್ಲಯ್ಯ ಪಾಲ್ಗೊಂಡಿದ್ದರು