ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ

ಎಂ ಎನ್ ಕೋಟೆ :

      ನಮ್ಮ ದೇಶದ ಹಿತದೃಷ್ಠಿಯಿಂದ ನರೇಂದ್ರ ಮೋಧಿಯವರ ಸಾಧನೆಯನ್ನು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಬೇಕು ಎಂದು ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ತಿಳಿಸಿದರು.

      ಗುಬ್ಬಿ ತಾಲ್ಲುಕಿನ ಅಳಿಲಘಟ್ಟ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಬೆಯಲ್ಲಿ ಮಾತನಾಡಿದ ಅವರು ನರೇಂದ್ರ ಮೊಧಿಯವರನ್ನು ನಾವೆಲ್ಲರೂ ಮತ್ತೊಮ್ಮೆ ದೇಶದ ಪ್ರದಾನಿಯನ್ನಾಗಿ ಮಾಡಲು ನಾವೆಲ್ಲರೂ ಒಗ್ಗಾಟಾಗಿ ಶ್ರಮಿಸಬೇಕು. ನಮ್ಮಲ್ಲಿ ನಮ್ಮ ಸಮಸ್ಯೆ ಏನೇ ಇರಲಿ ನಾವು ಕಳಿತು ಸಮಸ್ಯೆಯನ್ನು ಬಗೆಹರಿಸಿಕೊಳೋಣ ಎಂದರು.

ಈ ಭಾಗದ ಕೆರೆಗಳಿಗೆ ಬಸವರಾಜು ರವರು ಕಳೆದ ಭಾರಿ ಸಂಸದರು ಆಗಿದ್ದಾಗ ನಾವೆಲ್ಲರೂ ಹೋರಾಟ ಮಾಡಿ ಹೇಮಾವತಿ ನೀರನು ಕೆರೆಗಳಿಗೆ ಹರಿಸಿದ್ದರು. ಅವರ ಖುಣ ತೀರಿಸಲು ಒಂದು ಅವಖಾಶ ಸಿಕ್ಕಿದೆ ಆದ್ದರಿಂದ ನಾವೆಲ್ಲರೂ ಸಹ ಬಸವರಾಜುರವರನ್ನು ಬೆಂಬಲಿಸಬೇಕು ಎಂದರು.

ಈ ಭಾಗದ ಅಳಿಲಘಟ್ಟ , ಹೊಸಕೆರೆ ಭಾಗದಲ್ಲಿ ಗುಳೆ ಹೋಗುವ ಪರಿಸ್ಥಿತಿ ಬಂದಿತ್ತು. ಈ ಭಾಗಕ್ಕೆ ನೀರು ಹರಿಸಿದರೆ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿದೆ. ಇನ್ನ ಹಾಗಲವಾಡಿ ಭಾಗಕ್ಕೆ ನೀರು ಹೋಗಬೇಕು ಈಗಾಗಲೇ ಕಾಮಾಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹಾಗಲವಾಡಿ ಬಾಗಕ್ಕೆ ನೀರು ಹೋಗುತ್ತದೆ. ಎಂದರು.

ಅವರು ನಮ್ಮಗೆ ಏನು ಕೊಡದು ಬೇಡ ಅವರ ಋಣ ತೀರಿಸಲು ಒಂದು ಅವಕಾಶ ಸಿಕ್ಕಿದೆ. ಕಾರ್ಯಕರ್ತರು ಹೊಂದಾಗಿ ನಮ್ಮ ಗುಬ್ಬಿ ತಾಲ್ಲೂಕಿನಲ್ಲಿ ಸುಮಾರು 25 ಸಾವಿರ ಮತಗಳ ಅಂತರದಿಂದ  ಮುಂಚೂಣಿಯಲ್ಲಿ ಇರುತ್ತೇವೆ ಎಂದರು.

ನರೇಂದ್ರ ಮೋಧಿಯವರು ನಮ್ಮ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ಅವರನ್ನು ಮತ್ತೇ ನಾವು ಪ್ರಧಾನಿಯನ್ನಾಗಿಮಾಡಲು ನಾವೆಲ್ಲರೂ ಸಹ ಪಕ್ಷತೀತಾವಾಗಿ ಕೆಲಸ ಮಾಡಬೆಕು ಎಂದು ತಿಳಿಸಿದರು.

ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಅ.ನ. ಲಿಂಗಪ್ಪ ಮಾತನಾಡಿ ಕಳೆದ 5ವರ್ಷದಲ್ಲಿ ಯಾವುದೇ ರೀತಿಯ ಭ್ರಷ್ಠಚಾರವಿಲ್ಲದೆ ಅಧಿಕಾರವನ್ನು ಯಶಸ್ವಿಯಾಗಿ ನಮ್ಮ ಕೇಂದ್ರ ಸರ್ಕಾರ ಮಾಡಿದೆ. ಮೋಧಿಯವರು ಈ ದೇಶದ ರಕ್ಷಣೆಯ ವಿಚಾರದಲ್ಲಿ ಮುಂದಾಗಿ  ಕೆಲಸ ಮಾಡಿದ್ದಾರೆ.ಮೋಧಿಯವರು ನೀಡಿರುವ ಪ್ರತಿಯೊಂದು ಯೋಜನೆಗಳು ಸಹ ಎಲ್ಲ ಸಮುದಾಯದವರಿಗೆ ಸಿಕ್ಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋಧಮ್ಮ , ಮಾಜಿ ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಸಂಜೀವಯ್ಯ , ಪುಟ್ಟರಾಜು, ಮುಖಂಡರಾದ ಸ್ವಾಮಿ, ಉದಯ್ , ರಾಜಶೇಖರಯ್ಯ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link