ಬೆಂಗಳೂರು
ಆನ್‍ಲೈನ್ ಓವೈಓ ಮೂಲಕ ರೂಂ ಮಾಡಿದ್ದ ಲಾಡ್ಜ್‍ನಲ್ಲಿ ಊಟ ಮುಗಿಸಿದ ನಂತರ ಯುವತಿಯ ಜೊತೆ ಜಗಳ ಮಾಡಿಕೊಂಡ ಯುವಕನೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಎಂಇಐ ಲೇಔಟ್‍ನ ಕಾರ್ತಿಕ್ (20)ಎಂದು ಗುರುತಿಸಲಾಗಿದೆ.ಆತನ ಜೊತೆಗೆ ಇದ್ದ 21 ವರ್ಷದ ಯವತಿಯನ್ನು ವಶಕ್ಕೆ ಪಡೆದುಕೊಂಡಿರುವ ಬಾಗಲಗುಂಟೆ ಪೆÇಲೀಸರು ಮುಂದಿನ ತನಿಖೆ ಕೈ ಗೊಂಡಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಹರ್ಬಲ್ ಲೈಫ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಹಾಗೂ ಯುವತಿಯು ಸ್ನೇಹಿತರಾಗಿದ್ದು ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇತ್ತೀಚೆಗೆ ಯುವತಿಗೆ ಬೇರೊಬ್ಬ ಯುವಕನ ಜೊತೆ ವಿವಾಹದ ನಿಶ್ಛಿತಾರ್ಥ ನಡೆದಿತ್ತು. ನಿನ್ನೆ ಸಂಜೆ ಯುವತಿಯ ಜೊತೆ ಮಾತನಾಡಿದ ಕಾರ್ತಿಕ್ ಕಿರ್ಲೊಸ್ಕರ್ ಬಡಾವಣೆಯಲ್ಲಿ ಸಾಯಿ ಪ್ಯಾಲೇಸ್ ಲಾಡ್ಜ್‍ನಲ್ಲಿ ಆನ್‍ಲೈನ್ ಮೂಲಕ ರೂಂ ಬುಕ್ ಮಾಡಿದ್ದ.
ರಾತ್ರಿ 8 ರಿಂದ ಬೆಳಿಗ್ಗೆ 8ರವರೆಗೆ ರೂಮ್ ಕಾಯ್ದಿರಿಸಿದ್ದ ಕಾರ್ತಿಕ್ ಯುವತಿಯನ್ನು ರೂಮ್‍ಗೆ ಕರೆದುಕೊಂಡು ಬಂದು ರಾತ್ರಿ ಉಳಿದು ಕೊಂಡಿದ್ದ. ರಾತ್ರಿ 10ರ ವೇಳೆ ಜೊಮೋಟೋ ಮೂಲಕ ಊಟ ತರಿಸಿಕೊಂಡು ಇಬ್ಬರೂ ಊಟ ಮಾಡಿದ್ದು ಕಾರ್ತಿಕ್ ಮದ್ಯ ಸೇವಿಸಿದ್ದಾನೆ.
ಭಾವಿ ಪತಿಯಿಂದ ಕರೆ
ಈ ವೇಳೆ ಯುವತಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಮೊಬೈಲ್ ಕರೆಮಾಡಿದ್ದು ಅದನ್ನು ಸ್ಪೀಕರಿಸದಂತೆ ಕಾರ್ತಿಕ್ ತಾಕೀತು ಮಾಡಿದ್ದಾನೆ. ಆದರೆ ಯುವತಿಯು ಒಪ್ಪದೆ ಆ ಯುವಕನಿಂದ ಮಾತನಾಡಿದ್ದರಿಂದ ಇಬ್ಬರ ನಡುವೆ ಜಗಳ ಉಂಟಾಗಿದೆ. ಜಗಳದಿಂದ ಬೇಸತ್ತ ಯುವತಿಯು ಮಲಗಿದ್ದು ಕಾರ್ತಿಕ್ ಮತ್ತಷ್ಟು ಮದ್ಯ ಸೇವಿಸಿದ್ದಾನೆ.
ಯುವತಿಯು ಬೆಳಿಗ್ಗೆ 6.30ರ ವೇಳೆ ಎಚ್ಚರಗೊಂಡು ನೋಡಿದಾಗ ಕಾರ್ತಿಕ್ ಇರಲಿಲ್ಲ. ಆತಂಕಗೊಂಡ ಆಕೆ ಶೌಚಾಲಯದ ಬಳಿ ನೋಡಿದ್ದು, ಬಾಗಿಲು ಭದ್ರಪಡಿಸಿತ್ತು. ಲಾಡ್ಜ್ ಸಿಬ್ಬಂದಿಯನ್ನು ಕರೆಸಿ ಬಾಗಿಲು ಹೊಡೆದು ನೋಡಿದಾಗ ಶೌಚಾಲಯದಲ್ಲಿ ಕಾರ್ತಿಕ್ ನೇಣಿಗೆ ಶರಣಾಗಿದ್ದ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೆÇಲೀಸರು ಯುವತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಾರ್ತಿಕ್ ನಾನು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಆತನನ್ನು ಅಕ್ಕ ಅನ್ನುತ್ತಿದ್ದ ಆತನಿಗೆ ಪ್ರೇಯಸಿ ಇದ್ದಳು. ನನಗೂ ನಿಶ್ಚತಾರ್ಥವಾಗಿತ್ತು. ಲಾಡ್ಜ್ ರೂಮ್ ಕಾಯ್ದಿರಿಸಿ ನನ್ನನ್ನು ಕರೆದುಕೊಂಡು ಬಂದಿದ್ದ.
ಅಕ್ಕ ಎನ್ನುತ್ತಿದ್ದ
ಊಟ ಮುಗಿದ ನಂತರ ಜಗಳವಾಗಿ ನಾನು ಮಲಗಿದ್ದು, ಆ ನಂತರ ಏನಾಯಿತು ಎನ್ನುವುದು ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರ ಗೊಂಡ ನಂತರ ಕಾರ್ತಿಕ್ ನೇಣಿಗೆ ಶರಣಾಗಿದ್ದಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ ಕಾರ್ತಿಕ ಅವರ ತಂದೆ ಅಂಧ ಮಕ್ಕಳ ಶಾಲೆ ನಡೆಸುತ್ತಿದ್ದು, ಅವರಿಗೂ ದೃಷ್ಟಿದೋಷವಿದೆ. ಮಗನನ್ನು ಕಳೆದುಕೊಂಡು ತಂದೆ, ತಾಯಿ ಆಘಾತಕ್ಕೊಳಗಾಗಿದ್ದಾರೆ.
ಆನ್‍ಲೈನ್ ಓವೈಓ ಮೂಲಕ ಕಾರ್ತಿಕ್ ಸಾಯಿ ಪ್ಯಾಲೇಸ್ ಲಾಡ್ಜ್‍ನಲ್ಲಿ 8 ಗಂಟೆಗಳ ಅವಧಿಗೆ ಕೊಠಡಿ ಬುಕ್ ಮಾಡಿದ್ದರು. ರೂಮ್ ನೀಡಿದ್ದ ಲಾಡ್ಜ್‍ನವರು ಕಾರ್ತಿಕ್ ಹಾಗೂ ಯುವತಿಯ ಹೆಚ್ಚಿನ ಮಾಹಿತಿ ಪಡೆದಿರಲಿಲ್ಲ. ದುರ್ಘಟನೆ ಸಂಬಂಧ ವಿಚಾರಿಸಿದರೆ ಆನ್‍ಲೈನ್ ಮೂಲಕ ಕೊಠಡಿ ಕಾಯ್ದಿರಿಸಿದ್ದ ಹೆಚ್ಚಿನ ಮಾಹಿತಿ ಪಡೆದು ಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ