ಮೌಂಟ್ ಅಬು:
ಬ್ರಹ್ಮಕುಮಾರಿ ಸಂಘಟನೆಯ ಮುಖ್ಯಸ್ಥೆ ರಾಜಯೋಗಿನಿ ದಾದಿ ಜಾನಕಿ ವಿಧಿವಶರಾಗಿದ್ದಾರೆ. 104 ವರ್ಷ ವಯಸ್ಸಿನ ಅವರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.”ಪ್ರೀತಿಯ ಚಿಂತನೆಗಳೊಂದಿಗೆ, ಬ್ರಹ್ಮ ಕುಮಾರೀಸ್ ನ ಆಧ್ಯಾತ್ಮಿಕ ಮುಖ್ಯಸ್ಥರಾದ ನಮ್ಮ ಪ್ರೀತಿಯ ದಾದಿ ಜಾನಕಿ ಶುಕ್ರವಾರ ನಸುಕಿನ 2 ಗಂಟೆಗೆ ಈ ಭೌತಿಕ ಜೀವನದಿಂದ ಹೊರನಡೆದಿದ್ದಾರೆ” ಎಂದು ಅವರ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
ಸ್ವಚ್ಛ ಭಾರತದ ರಾಯಭಾರಿಯೂ ಆಗಿದ್ದ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಶಾಂತಿವನದಲ್ಲಿ ಇರಿಸಲಾಗಿದೆ. ಮಧ್ಯಾಹ್ನ 3.30ಕ್ಕೆ ಅಂತಿವ ವಿಧಿವಿಧಾನಗಳು ನೆರವೇರಲಿದೆ ಎಂದು ತಿಳಿಸಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ