ಮೇ.10ಕ್ಕೆ ಬ್ರಾಹ್ಮಣ ಸಂಘದ ಶತಮಾನೋತ್ಸವ

ಚಿತ್ರದುರ್ಗ:

    ಬ್ರಾಹ್ಮಣ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ವಿವಿಧ ಕಾರ್ಯಕ್ರಮಗಳು ಮೇ. 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಲಿದೆ ಎಂದು ಚಿತ್ರದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ತಿಳಿಸಿದರು.

     ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದಿನಾಂಕ:24-4-1918 ರಲ್ಲಿ ಚಿತ್ರದುರ್ಗದ ಪ್ರಖ್ಯಾತ ವಕೀಲರಾಗಿದ್ದ ವೆಂಕಟಶಾಮಣ್ಣನವರು ಸಂಸ್ಥಾಪಕ ಅಧ್ಯಕ್ಷರಾಗಿ ಬ್ರಾಹ್ಮಣ ವಿದ್ಯಾರ್ಥಿ ಸಹಾಯ ಸಂಘವನ್ನು ಸ್ಥಾಪಿಸಿದರು. 1942 ರಲ್ಲಿ ಚಿತ್ರದುರ್ಗ ಪುರಸಭೆ ಅಧ್ಯಕ್ಷರಾಗಿದ್ದಾಗ 200 ಇಂಟು 200 ಅಡಿ ಜಾಗವನ್ನು ಸಂಘಕ್ಕೆ ಮಂಜೂರು ಮಾಡಲಾಯಿತು. 1918 ರಲ್ಲಿ ನೊಂದಣಿಯಾಯಿತು. 1943 ರಲ್ಲಿ ಸರ್ಕಾರ ಬ್ರಾಹ್ಮಣ ಸಂಘಕ್ಕೆ ಸಿಂಗಾಪುರದಲ್ಲಿ ಹದಿನೈದು ಎಕರೆ ಜಮೀನು ನೀಡಿದೆ.1945 ರಲ್ಲಿ ಹಾಸ್ಟಲ್ ಕಟ್ಟಡಕ್ಕೆ ಬುನಾದಿ ಹಾಕಲಾಯಿತು ಎಂದು ಬ್ರಾಹ್ಮಣ ಸಂಘ ನಡೆದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

      ಗಾಯತ್ರಿ ಕಲ್ಯಾಣ ಮಂಟಪ ಕಟ್ಟಲು ಸರ್ಕಾರ ಐವತ್ತು ಸಾವಿರ ರೂ. ನೀಡಿತು. ನಮ್ಮ ಸಮಾಜದ ಧಾನಿಗಳು ಹಾಗೂ ಬೇರೆ ಸಮಾಜದವರು ನೆರವು ನೀಡಿದ್ದಾರೆ ಎಂದು ಸ್ಮರಿಸಿದ ಪಿ.ಎಸ್.ಮಂಜುನಾಥ್ ಪ್ರತಿ ವರ್ಷವೂ ಬ್ರಾಹ್ಮಣ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ ಎಂದು ಹೇಳಿದರು.

       ಬ್ರಾಹ್ಮಣ ಸಂಘದ ಶತಮಾನೋತ್ಸವ ಸಂಭ್ರಮಾಚರಣೆ ಸಮಾರೋಪ ಸಮಾರಂಭದಲ್ಲಿ ಮೇ.10 ರಂದು ಸಂಜೆ 5 ಕ್ಕೆ ಹೊರಡುವ ಬೃಹತ್ ಶೋಭಾಯಾತ್ರೆಯಲ್ಲಿ ಹರಿಹರಪುರ ಶ್ರೀಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಮೇಲುಕೋಟೆ ಆನಂದಾಶ್ರಮದ ಶಠಕೋಪ ರಾಮಾನುಜ ಜೀಯರ್, ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಸಾನಿಧ್ಯ ವಹಿಸಲಿದ್ದಾರೆ. 11 ರಂದು ಬೆಳಿಗ್ಗೆ 7-30 ರಿಂದ ಗಣಪತಿ ಹೋಮ, ಕಳಸಾರಾಧನೆ, ನವಗ್ರಹ ಪರಸ್ಸರ, ಚಂಡಿಕಾ ಹವನ, ಕುಮಾರಿ ಪೂಜೆ, ಸುಮಂಗಲಿ ಪೂಜೆ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಲಿದೆ.

      ಸಂಜೆ 6 ಕ್ಕೆ ವಿಪ್ರ ಸಾಧಕರುಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ಹರಿಹರಪುರ ಶ್ರೀಮಠದ ಆಡಳಿತಾಧಿಕಾರಿ ಬಿ.ಎಸ್.ರವಿಶಂಕರ್ ಇವರುಗಳು ಆಗಮಿಸಲಿದ್ದಾರೆ. ಬ್ರಾಹ್ಮಣ ಸಂಘದ ಹಿರಿಯ ಸದಸ್ಯರು, 50 ವರ್ಷಗಳ ಕಾಲ ಸಾರ್ಥಕ ವೈವಾಹಿಕ ಜೀವನ ನಡೆಸಿದ ದಂಪತಿಗಳು, ವಿವಿಧ ಸಂಘಟನೆಗಳ ಮುಖ್ಯಸ್ಥರು, ಸಂಘಕ್ಕೆ ಸೇವೆ ಸಲ್ಲಿಸಿದವರು ಮತ್ತು ಶತಮಾನೋತ್ಸವ ಸಂಭ್ರಮಾಚರಣೆ ವಿವಿಧ ಸಮಿತಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಗುವುದು ಎಂದು ಪಿ.ಎಸ್.ಮಂಜುನಾಥ್ ತಿಳಿಸಿದರು.ಬ್ರಾಹ್ಮಣ ಸಂಘದ ಕಾರ್ಯದರ್ಶಿಗಳಾದ ಡಿ.ಜಿ.ಪ್ರಾಣೇಶ್‍ರಾವ್, ಬಿ.ಎನ್.ಲಕ್ಷ್ಮಿನಾರಾಯಣರಾವ್, ನಿರ್ದೇಶಕರುಗಳಾದ ಜಿ.ಶಂಕರ್‍ರಾಂ, ಕೆ.ಹೆಚ್.ಶಂಕರ್, ಪದ್ಮಭೀಮರಾವ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap