ದೇಶದ ಮಹಾನ್ ವ್ಯಕ್ತಿಗಳು ಮಾದರಿ ಆಗಲಿ

ಹರಪನಹಳ್ಳಿ:

     ವಿದ್ಯಾರ್ಥಿಗಳಿಗೆ ದೇಶ ಕಂಡ ಮಹಾನ್ ವ್ಯಕ್ತಿಗಳು ಮಾದರಿ ಆಗಬೇಕೇ ವಿನಃ ಸೆಲಿಬ್ರಿಟಿಗಳಲ್ಲ ಎಂದು ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಶಾರದೇಶಾನಂದಜೀ ಮಹಾರಾಜ್ ಕಿವಿಮಾತು ಹೇಳಿದರು.

      ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಮತ್ತು ಕ್ರೀಡಾ ಸಂಘದ ಉದ್ಘಾಟನೆ, ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ದಿ.ಎ.ಪಿ.ಜೆ.ಅಬ್ದುಲ್, ವಿಶ್ವೇಶ್ವರಯ್ಯರಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ . 

      ಕೆಲಸ ನೀಡುವ ಕೈಗಳಾಗಬೇಕೇ ವಿನಃ ಕೆಲಸಕ್ಕೆ ಕೈಕೊಯೊಡ್ಡುವ ಸಂಸ್ಕೃತಿ ನಮ್ಮದಾಗಬಾರದು ಎಂದು ಕಿವಿಮಾತು ಹೇಳಿದರು.
ಭಾರತದ ಸಂಸ್ಕೃತಿ, ಸಂಸ್ಕಾರ, ಶಿಸ್ತು ವಿದ್ಯಾರ್ಥಿ ಹಂತದಲ್ಲೇ ಬೆಳೆಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ದೇಶಕ್ಕೆ ವಿಜ್ಞಾನಿಗಳ ಕೊಡುಗೆ. ಅವರ ಹಾದಿ ನೀವು ಸಾಧನೆ ಮಾಡಿ ಎಂದು ಕರೆ ನೀಡಿದರು

      ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಕೆ.ಆರ್. ಜಯಶೀಲಾ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು. ದೇಶದ ಭಾವಿ ಪ್ರಜೆಗಳಾದ ತಾವು ಸಾಧಕರ ಹಾದಿಯಲ್ಲಿ ಮುನ್ನೆಡೆಯಬೇಕು. ವಿದ್ಯಾರ್ಥಿ ಸಂಘಗಳು ಕ್ರಿಯಾಶೀಲರಾಗಿ ನಾಯಕತ್ವ ಗುಣಬೆಳೆಸಿಕೊಳ್ಳಬೇಕು. ಹರಪನಹಳ್ಳಿಗೆ ಇರುವ ಹಿಂದುಳಿದ ತಾಲ್ಲೂಕು ಹಣೆಪಟ್ಟಿ ತೆಗೆದುಹಾಕಲು ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

      ಕಾಲೇಜು ಪ್ರಾಚಾರ್ಯ ಎಂ.ಎಸ್.ದೇವರಾಜ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಆರ್.ಸತ್ಯಾನ್ವೇಶ್, ಸಿವಿಲ್ ವಿಭಾಗದ ಜಿ.ಜಯಪ್ಪ, ಉಪನ್ಯಾಸಕರ ಕೆ.ದೃವಕುಮಾರ್, ಜಿ.ಎಂ.ರೇಖಾ, ವಿದ್ಯಾರ್ಥಿ ಪದಾಧಿಕಾರಿಗಳು ಸೇರಿದಂತೆ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link