ಹಳೆಯ ಪಿಂಚಣಿ ಯೋಜನೆಗೆ ಒತ್ತಾಯ

ಬೆಂಗಳೂರು

     ಹಳೆಯ ಪಿಂಚಣಿ ಯೋಜನೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ಹಾಗೂ ನ್ಯಾಷನಲ್ ಮೂವ್‍ವೆಂಟ್ ಫಾರ್ ಓಲ್ಡ್ ಪೆನ್ಷನ್ ಸ್ಕೀಮ್ ಸಂಘಟನೆಗಳ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

       ಫ್ರೀಡಂ ಪಾರ್ಕ್‍ನಲ್ಲಿ ಬುಧವಾರ ಸೇರಿದ ಪ್ರತಿಭಟನಾಕಾರರು ‘ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ಎಂಬ ಘೋಷ ವಾಕ್ಯದೊಂದಿಗೆ ಪ್ರತಿಭಟನೆ ನಡೆಸಿದ ನೌಕರರು, ಸರ್ಕಾರವು ನೌಕರರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

      ಕೇಂದ್ರ ಸರ್ಕಾರ 2004 ಜನವರಿ.1 ರಂದು ಹಾಗೂ 2006 ಏಪ್ರಿಲ್ 1 ರಿಂದ ತನ್ನ ನೌಕರ ವರ್ಗಕ್ಕೆ ಎನ್‍ಪಿಎಸ್ ಜಾರಿಗೊಳಿಸಿದೆ . ಈ ಮೂಲಕ ನೌಕರ ಹಾಗೂ ಅವರ ಕುಟುಂಬ ವರ್ಗವನ್ನು ಸಂಕಷ್ಟ ದೂಡಿದೆ. ಇದನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.

     ಸಂಘಟನೆಯ ಹೋರಾಟಗಳಿಂದ ರಾಜ್ಯ ಸರ್ಕಾರ ಡಿಜಿಆರ್‍ಜಿ ಹಾಗೂ ಕುಟುಂಬ ಪಿಂಚಣಿ ಜಾರಿ ಮಾಡಿದೆ. ಆದರೆ, ಮೊದಲಿದ್ದಂತೆ ನಿಶ್ಚಿತ ಪಿಂಚಣಿಯನ್ನು ಜಾರಿ ಮಾಡಬೇಕು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎನ್‍ಪಿಎಸ್ ಕೈಬಿಡುವುದಾಗಿ ಭರವಸೆ ನೀಡಿದ್ದರು. ಅವರ ಗಮನ ಸೆಳೆಯಲು `ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶಾಂತರಾಮ, ತಿಳಿಸಿದರು.

      2006ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿತ ಪಿಂಚಣಿ ರದ್ದುಗೊಳಿಸಿ ನೂತನ ಪಿಂಚಣಿ ಜಾರಿಗೊಳಿಸಲಾಗಿತ್ತು. ಆ ನಂತರ ಅನೇಕ ಹೋರಾಟಗಳನ್ನು ಕೈಗೊಂಡರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಆದ್ದರಿಂದ ಈ ಬಾರಿ ನೂತನವಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

      ಕಳೆದ ಜ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ 90 ಸಾವಿರ ನೌಕರರು ನಡೆಸಿದ ಹೋರಾಟದ ಫಲವಾಗಿ ಮರಣ ಮತ್ತು ನಿವೃತ್ತಿ ಉಪಧನ ಹಾಗೂ ಕುಟುಂಬ ಪಿಂಚಣಿ ಯೋಜನೆ ಜಾರಿಯಾಗಿತ್ತು. ಅದರಲ್ಲೂ ಕೆಲವೊಂದು ಷರತ್ತುಗಳಿವೆ. ಈಗ ಸಂಪೂರ್ಣವಾಗಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತಂದು, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದರು.

      ಪ್ರತಿಭಟನೆ ಸ್ಥಳದಲ್ಲೇ ರಕ್ತದಾನ ಮಾಡಲಾಗುತ್ತದೆ. ಅದೇ ರೀತಿ, ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಸುಮಾರು 3.5 ಲಕ್ಷ ಎನ್‍ಪಿಎಸ್ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿದ್ದಾರೆ.ವಿಕ್ಟೋರಿಯಾ, ರೋಟರಿ, ಲಯನ್ಸ್, ರೆಡ್ ಕ್ರಾಸ್ ಸೇರಿ ವಿವಿಧ ರಕ್ತನಿಧಿಗಳ ಜತೆ ರಕ್ತ ಸಂಗ್ರಹಣೆ ಸಂಬಂಧ ಚರ್ಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link