ಹೊಳಲ್ಕೆರೆ:
ನ್ಯಾ. ಎ.ಜಿ.ಸದಾಶಿವಾ ಆಯೋಗ ವರದಿ ಬಹಿರಂಗ ಚರ್ಚೆಗೆ ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ, ಕರ್ನಾಟಕ ಬಂಜಾರ ಜನ ಜಾಗೃತಿ ಅಭಿಯಾನ ಸಮಿತಿಯ, ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಹೊಳಲ್ಕೆರೆ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಕೊಟ್ರೆನಂಜಪ್ಪ ಶಾಲಾ ಮೈದಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ನ್ಯಾ. ಎ.ಜೆ.ಸದಾಶಿವಾ ಆಯೋಗದ ವರದಿಯು ಅವೈಜ್ಷಾನಿಕ,ಪ್ರೇರಿತ ವರದಿಯಾಗಿದ್ದು. ಮತ್ತು ಪರಿಶಿಷ್ಟ ಜಾತಿಯು 99 ಜನಾಂಗಗಳಿಗೆ ಅನ್ಯಾಯ ಮಾಡುವ ವರದಿಯಾಗಿದ್ದು ಈ ವರದಿಯಿಂದ ಭೋವಿ, ಲಂಬಾಣಿ ಕೊರಚ ಕೊರಮ ಜನಾಂಗಗಳಿಗೆ, ತೀವ್ರ ಅನ್ಯಾಯ ವಾಗಲಿದೆ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಪ್ರತಿಭಟನಕಾರರು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ನಾಯ್ಕ ಅವರು ಮಾತನಾಡಿ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯು ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಮತ್ತು ಕೆಲವು ಸಂಘಟನೆಗಳು ಗುಪ್ತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಶಡ್ಯಂತ್ರ ರಚಿಸಿದ್ದು, ಈ ವರದಿಯನ್ನು ಏಕಾಏಕಿ ಶಿಫಾರಸ್ಸು ಮಾಡಿದರೆ ಪರಿಶಿಷ್ಟ ಜಾತಿಯ ಭೋವಿ, ಲಂಬಾಣಿ, ಕೊರಚ, ಕೊರಮ ಜನ ಸೇರಿ 99 ಜನಾಂಗಗಳಿಗೆ ಅನ್ಯಾಯವಾಗಲಿದೆ ಎಂದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಸಂವಿಧಾನ ಬದ್ದ ಮೀಸಲಾತಿ ಕಲ್ಪಿಸುವಾಗ ಸ್ಪಶ್ರ್ಯ, ಅಸ್ಪಶ್ರ್ಯ ಎಂಬ ವಿಚಾರಗಳನ್ನು ಪರಿಗಣಿಸದೇ ಶೋಷಿತರು ಎಂಬ ಸಮಗ್ರ ಕಲ್ಪನೆಯಿಂದ ಮೀಸಲಾತಿಗೆ ಒಳಪಡಿಸಿದ್ದು. ಸಂವಿಧಾನ ಬದ್ಧವಾಗಿರುವುದು ಕಂಡು ಬರುತ್ತದೆ. ಆದರೆ ಕೆಲವು ರಾಜಕಾರಣಿಗಳ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ನ್ಯಾ.ಎ.ಜೆ.ಸದಾಶಿವಾ ಆಯೋಗದ ವರದಿಯನ್ನು ತಮ್ಮ ಇಚ್ಚೆಯಂತೆ ಬರೆದುಕೊಂಡು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು. ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಿಂದಾಗಿ ಎಸ್ಸಿ ಜನಾಂಗದ ಐಕ್ಯತೆಗೆ ಧಕ್ಕೆ ಉಂಟು ಮಾಡುವ ಸಂದರ್ಭಗಳಿದ್ದು ನ್ಯಾ. ಎ.ಜೆ.ಹೆ. ಸದಾಶಿವ ಆಯೋಗ ಬಹಿರಂಗ ಪಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಮೀಸಲಾತಿ ಸಂರಕ್ಷಣಾ ಒಕ್ಕೂಟದ ಅನಂತನಾಯ್ಕ್ ಮನವಿಯನ್ನು ಓದಿ ತಹಶೀಲ್ದಾರ್ ಗಾಯಿತ್ರಮ್ಮ ರವರಿಗೆ ಸಲ್ಲಿಸಿದರು.
ಪ್ರತಿಭಟನಾ ರ್ಯಾಲಿ ನೇತೃತ್ವವನ್ನು ಭೋವಿ ಸಂಘದ ಅಧ್ಯಕ್ಷ ಡಿ.ಸಿ.ಮೋಹನ್, ಬಂಜಾರ ಸಮಾಜದ ಮುಖಂಡರಾದ ಜಯಸಿಂಹ ಕಾಟ್ರೋತ್, ಕುಳುವ ಸಮಾಜದ ಜಯಶೀಲಮ್ಮ. ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಬಂಜಾರ ಜನ ಜಾಗೃತಿ ಅಭಿಯಾನ ಸಮಿತಿಯ ಸಂಚಾಲಕರಾದ ಗಣೇಶ್‍ನಾಯ್ಕ್, ರಮೇಶ್ ನಾಯ್ಕ್, ಚನ್ನಯನಹಟ್ಟಿ ತಿಪ್ಪೇಸ್ವಾಮಿ, ರೈತ ಮುಖಂಡ ಶೇಖರ್‍ನಾಯ್ಕ್, ಹನುಮಂತನಾಯ್ಕ್, ತಾಂಡ ರಕ್ಷಣಾ ವೇದಿಕೆಯ ಅಧ್ಯಕ್ಷ ಲಿಂಗರಾಜ ನಾಯ್ಕ್, ವಸಂತನಾಯ್ಕ್, ಸತೀಶ್ ನಾಯ್ಕ್, ಚಂದ್ರ ನಾಯ್ಕ್, ಹೇಮಂತ, ಗೋಪಾಲ ನಾಯ್ಕ್ ಬಸವರಾಜ ನಾಯ್ಕ್ ನಾಗಾನಾಯ್ಕ್, ಹೀರ್ಯಾ ನಾಯ್ಕ್, ಪೀರ್ಯಾ ನಾಯ್ಕ್. ಮುಂತಾದವರು ನೇತೃತ್ವ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ