ಬೆಂಗಳೂರು
ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ತಕ್ಕಮಟ್ಟಿಗೆ ತಡೆಯಲಾಗಿದೆ ಆದರೂ ಪುಟ್ಟೇನಹಳ್ಳಿ ಸುತ್ತಾಮುತ್ತಾ ನಡೆಯುತ್ತಿದೆ ಎಂಬ ಸುಳಿವು ಪಡೆದ ಸಿಸಿಬಿ ಮನೆಯ ಮೇಲೆ ದಾಳಿ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿ ಯುವತಿಯರನ್ನು ರಕ್ಷಿಸಿದ್ದಾರೆ.
ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ನಲ್ಲಿ ಗಿರಾಕಿಗಳನ್ನು ಬರಮಾಡಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ವಿಭಾಗದ ಎಸಿಪಿ ಮದ್ವಿ ಹಾಗು ತಂಡ ದಾಳಿ ಮಾಡಿತ್ತು. ಈ ವೇಳೆ ಪ್ರಮುಖ ಆರೋಪಿ ಯೋಗಿಶ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿ, ವಿವಿಧ ರಾಜ್ಯದ 27 ಯುವತಿಯರನ್ನು ಬಂಧಿಸಿದ್ದಾರೆ. ದಾಳಿ ವೇಳೆ ವಿವಿಧ ರಾಜ್ಯದ ಒಟ್ಟು 27 ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ನೇಪಾಳದ-9 , ಪಂಜಾಬ್ – 4, ದೆಹಲಿ-1, ಜಮ್ಮು ಕಾಶ್ಮೀರ್ 2, ಮಹಾರಾಷ್ಟ್ರ-1 ಸೇರಿದಂತೆ ವಿವಿದ ರಾಜ್ಯಗಳ ಒಟ್ಟು 27 ಯುವತಿಯರ ರಕ್ಷಣೆ ಮಾಡಲಾಗಿದೆ.ಸಿಸಿಬಿ ಪೊಲೀಸರು ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ ಯೋಗೇಶ್ ಸೇರಿ ಮೂವರ ಹೆಡೆಮುರಿ ಕಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ