ಉಪಚುನಾವಣೆ :15ಕ್ಷೇತ್ರದಲ್ಲೂ ನಾವು ಸ್ಪರ್ಧೆ ಮಾಡುತ್ತೇವೆ : ದೇವೇಗೌಡ

ಬೆಂಗಳೂರು

    ಅನರ್ಹ ಶಾಸಕರಿಗೆ ಟಿಕೆಟ್ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೇ ಅವರ ಗೆಲುವಿನ ಸಾಮಥ್ರ್ಯದ ಬಗ್ಗೆ ಗೊಂದಲವಿದೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮತದಾರರನ್ನು ಸೆಳೆಯುವ ಸಲುವಾಗಿ ಯಡಿಯೂರಪ್ಪ ಅವರು ಎಲ್ಲಾ ಅನರ್ಹ ಶಾಸಕರನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ.ಹೀಗಿರುವಾಗ ಚುನಾವಣೆಯ ಪಾವಿತ್ರ್ಯತೆ ಎಲ್ಲಿರುತ್ತದೆ ಎಂದು ಪ್ರಶ್ನಿಸಿದ್ದಾರೆ.ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಅವಕಾಶ ನೀಡುತ್ತಿದ್ದಂತೆಯೇ ಯಡಿಯೂರಪ್ಪ ಅವರು, ಎಲ್ಲಾ ಅನರ್ಹ ಶಾಸಕರನ್ನು ಸಚಿವರನ್ನಾಗಿ ಮಾಡುವುದಾಗಿ ಘೋಷಣೆ ಮಾಡಿಬಿಟ್ಟರು.

    ಇದು ಅನರ್ಹ ಶಾಸಕರ ಬಗ್ಗೆ ಯಡಿಯೂರಪ್ಪ ಅವರಲ್ಲಿಯೇ ಗೊಂದಲವಿರುವುದನ್ನು ತೋರಿಸುತ್ತದೆ.ಅನರ್ಹ ಶಾಸಕರನ್ನು ಸಚಿವರನ್ನಾಗಿ ಮಾಡಿದರೆ, ಅವರವರ ಕ್ಷೇತ್ರಗಳ ಜನರು ತಮ್ಮ ಶಾಸಕರು ಸಚಿವರಾಗುತ್ತಾರೆಂದು ಮತಗಳನ್ನು ಹಾಕುತ್ತಾರೆ.ಹೀಗಾಗಿ ಯಡಿಯೂರಪ್ಪ ಅವರ ಈ ರೀತಿ ಘೋಷಣೆ ಮಾಡಿದ್ದಾರೆಂದು ತಿಳಿಸಿದ್ದಾರೆ.

    ಇದೇ ವೇಳೆ ಜೆಡಿಎಸ್-ಕಾಂಗ್ರೆಸ್ ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಗೊಂಡಿರುವುದನ್ನು ದೇವೇಗೌಡ ಅವರು ಸ್ವಾಗತಿಸಿದ್ದಾರೆ. ಗೆಲುವು, ಸೋಲು ಎಂಬುದು ಜನರ ಕೈಯಲ್ಲಿದೆ.ಜನರು ಏನನ್ನು ನಿರ್ಧರಿಸುತ್ತಾರೆಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ಎಲ್ಲಾ 15 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸುವುದಂತೂ ಖಚಿತ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap