ಅನಾಮಧೇಯ ಪತ್ರಕ್ಕೆ ಉತ್ತರ ನೀಡಿದ ಬಿ ಎಸ್ ವೈ ಆಪ್ತರು..!

ಬೆಂಗಳೂರು

     ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧದ ಅನಾಮಧೇಯ ಪತ್ರಕ್ಕೆ ಪ್ರತ್ಯುತ್ತರ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಆಪ್ತ ಬಳಗ ಪಕ್ಷದ ವರಿಷ್ಠರಿಗೆ ರವಾನಿಸಿದೆ.

     ಯಡಿಯೂರಪ್ಪನವರ ಬಗ್ಗೆ ಅಪಪ್ರಚಾರ ಮಾಡುವಅನಾಮಧೇಯ ಪತ್ರವನ್ನು ಸೃಷ್ಟಿಸಿರುವವರನ್ನು ಪತ್ತೆ ಹಚ್ಚಿಅವರಿಗೆಎಚ್ಚರಿಕೆ ನೀಡಬೇಕುಎಂದುಯಡಿಯೂರಪ್ಪನವರ ಆಪ್ತ ಬಳಗ ವರಿಷ್ಠ ನಾಯಕರಲ್ಲಿ ಮನವಿ ಮಾಡಿದೆ.ಕೆಲ ದಿನಗಳ ಹಿಂದೆಯಡಿಯೂರಪ್ಪನವರಿಗೆ ವಯಸ್ಸಾಗಿದೆ, ಅವರಿಂದ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಅನಾಮಧೇಯ ಪತ್ರ ಬಿಜೆಪಿ ವಲಯದಲ್ಲಿ ಹರಿದಾಡಿತ್ತು.ಈ ಪತ್ರದ ವಿರುದ್ಧ ಬಿಜೆಪಿಯಲ್ಲಿ ಭಾರಿಆಕ್ರೋಶ ವ್ಯಕ್ತವಾಗಿತ್ತು.

     ಈ ಅನಾಮಧೇಯ ಪತ್ರಕ್ಕೆಎದಿರೇಟು ನೀಡಿರುವ ಮುಖ್ಯಮಂತ್ರಿಯಡಿಯೂರಪ್ಪನವರ ಆಪ್ತ ಬಳಗ ಯಡಿಯೂರಪ್ಪನವರ ವಿರುದ್ಧಅಪಪ್ರಚಾರ ಮಾಡಲಾಗುತ್ತಿದೆ.ಮುಖ್ಯಮಂತ್ರಿಯಾಗಿ ನೇಮಕವಾಗುವಾಗ ಉದ್ಭವವಾಗದ ವಯಸ್ಸಿನ ಪ್ರಶ್ನೆ, ಈಗ ಪ್ರಸ್ತಾಪಿಸಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿದೆ.ಈ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಿ.ಅಂಥವರಿಗೆಕಠಿಣಎಚ್ಚರಿಕೆಯನ್ನೂ ನೀಡಿಎಂದು ಪಕ್ಷದರಾಷ್ಟ್ರೀಯಅಧ್ಯಕ್ಷಜೆ.ಪಿ ನಡ್ಡಾ ಮತ್ತು ಗೃಹ ಸಚಿವಅಮಿತ್ ಶಾರವರಿಗೆ ಪತ್ರದಲ್ಲಿ ಮನವಿ ಮಾಡಲಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಯಸ್ಸಾಗಿರಬಹುದು, ಅವರಿಗೆಅನಾರೋಗ್ಯವಿಲ್ಲ. ಯಡಿಯೂರಪ್ಪನವರ ನಂತರದ ನಾಯಕತ್ವ ಯಾರದ್ದು? ಎಂಬ ಪ್ರಶ್ನೆಗೆಯಾರ ಬಳಿಯೂ ಉತ್ತರವಿಲ್ಲ. ಯಡಿಯೂರಪ್ಪನವರಂತಹದೊಡ್ಡ ಲಿಂಗಾಯತ ಸಮುದಾಯದ ನಾಯಕರಿದ್ದರೆ ಹೇಳಲಿ, ಸುಮ್ಮನೆಅನಗತ್ಯಗೊಂದಲ ಸೃಷ್ಟಿಸುವುದಕ್ಕೆ ಅವಕಾಶ ಕೊಡಬೇಡಿಎಂದು ಪತ್ರದಲ್ಲಿ ಹೇಳಲಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಆಸೆ ಪಟ್ಟಿಲ್ಲ, ಹೀಗಿರುವಾಗ ಪೂರ್ಣಾವಧಿ ತನಕ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ವರಿಷ್ಠ ನಾಯಕರು ಬೆಂಬಲ ಕೊಡಬೇಕುಎಂದು ಪತ್ರದಲ್ಲಿ ಹೇಳಲಾಗಿದೆ.ಪಕ್ಷಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್‍ಜೇಟ್ಲಿ ಅವರನ್ನುಕೇಂದ್ರ ಸಚಿವ ಸಂಪುಟದಲ್ಲಿ ಮುಂದುವರೆಸಲಾಗಿತ್ತು ಎಂಬುದನ್ನು ಈ ಪತ್ರದಲ್ಲಿ ನೆನಪಿಸಲಾಗಿದೆ.

   ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅನಾಮಧೇಯ ಪತ್ರ ಸೃಷ್ಟಿಸುವವರಿಗೆ ಕಟುವಾದ ಸಂದೇಶ ರವಾನಿಸಿ, ಇಲ್ಲದಿದ್ದರೆ ಪಕ್ಷ ಹಾಗೂ ಸರ್ಕಾರಕ್ಕೂ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap