ಬುದ್ಧ ಜಯಂತಿ ಕಾರ್ಯಕ್ರಮ

ಚಳ್ಳಕೆರೆ

     ಮನುಷ್ಯನ ಪ್ರಯತ್ನವಿಲ್ಲದೆ ತಾನಾಗಿಯೇ ಯಾವುದೇ ಬದಲಾವಣೆ ಜಗತ್ತಿನಲ್ಲಿ ನಡೆಯುವುದಿಲ್ಲ ಎಂದು ವೈಜ್ಞಾನಿಕ ಮನೋಧರ್ಮವನ್ನು 2500 ವರ್ಷಗಳ ಹಿಂದೆಯೇ ಬುದ್ದ ಜಗತ್ತಿಗೆ ಸಾರಿದ್ದಾರೆ ಎಂದು ಸಾಹಿತಿ ಮೋದೂರು ತೇಜ ಹೇಳಿದರು.ತಾಲೂಕಿನ ಕನ್ನಡ ರಕ್ಷಣಾ ಮತ್ತು ಸಾಂಸ್ಕತಿಕ ವೇದಿಕೆ ನಗರದ ಕೆಎಸ್‍ಆರ್‍ಟಿಸಿ ನಿಲ್ದಾಣದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

     ಲೌಖಿಕ ಬದುಕಿನಲ್ಲಿ ಜೀವಿಸುವ ಮನುಜರಲ್ಲಿ ಕರುಣೆ, ಪ್ರೀತಿ-ಮಮತೆ ಇರಬೇಕು ಎನ್ನುವುದು ಬುದ್ಧನ ಚಿಂತನೆಯಾಗಿತ್ತು. ಒಂದು ಜೀವಕ್ಕೆ ಪ್ರಾಣ ಕೊಡುವ ಶಕ್ತಿ ಇಲ್ಲ ಎಂದ ಮೇಲೆ ಅದರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ ಎಂದು ತಿಳಿಸಿದ ಮಾನವತಾವಾದಿ ಎಂದು ಹೇಳಿದರು.

     ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಬುದ್ಧನ ಆದರ್ಶ ಅಗತ್ಯವಿದೆ. ಮಾನವೀಯ ಸಂಬಂಧಗಳೆ ಭಿನ್ನವಾಗುತ್ತಿರುವ ಸಮಾಜಕ್ಕೆ ಬುದ್ಧನ ಜಯಂತಿ ಆಚರಣೆಗಳು ಶಾಂತಿ, ಸಂದೇಶದ ಜಾಗೃತಿಗೆ ಆಧಾರವಾಗಬೇಕು ಎಂದು ತಿಳಿಸಿದರು.
ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ವೈರಿಯಿಂದ ವೈರಿ ನಾಶವಾಗುವುದಿಲ್ಲ.

     ಅವೈರಿಯಿಂದ ವೈರಿ ನಾಶವಾಗುತ್ತದೆ ಎನ್ನುವ ಬುದ್ಧನ ವಾಣಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಧ್ವೇಷ-ವೈಷಮ್ಯದಿಂದ ನೆಮ್ಮದಿ ಸಮಾಜ ಕಾಣಲು ಸಾಧ್ಯವಿಲ್ಲ. ಬುದ್ಧನ ಆದರ್ಶ ಬದುಕು ಸಮಾಜಕ್ಕೆ ಅನುಕರಣೆ ಆಗಬೇಕು ಎಂದು ಹೇಳಿದರು.ವೇದಿಕೆ ಸಮಿತಿಯ ಎಚ್. ಲಂಕಪ್ಪ, ಎಲ್. ಲಿಂಗಣ್ಣ, ಪಿ.ಡಿ. ಮಂಜುನಾಥ, ಕರಿಬಸವ, ದೇವರಾಜ, ಅಶೋಕ್‍ತೇಜ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap