ಹಿರಿಯೂರು ನಗರಸಭೆಯಿಂದ 18.23ಕೋಟಿ ಉಳಿತಾಯ ಬಜೆಟ್ ಮಂಡಣೆ

ಹಿರಿಯೂರು :

       ಗರದ ವಿವಿಧ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲು ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಶಾಸಕಿ ಪೂರ್ಣಿಮಾಶ್ರೀನಿವಾಸ್ ಹೇಳಿದರು.ನಗರಸಭೆ ಸಭಾಂಗಣದಲ್ಲಿ ನಡೆದ 2019-20 ನೇ ಸಾಲಿನ ಬಜೆಟ್‍ಮಂಡನೆ ಹಾಗೂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಸರ್ಕಾರದ ವಿವಿಧ ಕಾಮಗಾರಿಗೆ ಗುತ್ತಿಗೆದಾರರು ಅತಿ ಕಡಿಮೆ ಮೊತ್ತದ ಟೆಂಡರ್ ನಿಗದಿಪಡಿಸಿ ನಂತರ ಕಳಪೆ ಕಾಮಗಾರಿ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಬಹುತೇಕ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕಾಮಗಾರಿ ನಡೆವ ಸ್ಥಳಕ್ಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ, ಗುಣಮಟ್ಟ ಪರಿಶೀಲಿಸಬೇಕೆಂದು ತಾಕೀತು ಮಾಡಿದರು.

        ಯುಜಿಸಿ ಕಾಮಗಾರಿ ಕೈಗೊಳ್ಳಲು 12 ಎಕರೆ 18 ಗುಂಟೆ ಜಮೀನು ಭೂಸ್ವಾಧೀನದ ಬಗ್ಗೆ ಪ್ರಸ್ತಾಪನೆ ಇದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಡಿಪಿಆರ್ ತಯಾರಿಸಿ ಅನುಸ್ಟಾನಗೊಳಿಸಲು ಕ್ರಮವಹಿಸಲಾಗಿದೆ. ಮತ್ತು 3.80 ಕೋಟಿ ರೂ. ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣ ಅಭಿವೃದ್ದಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

        ಲಕ್ಕವ್ವನಹಳ್ಳಿ ಮಿನಿ ಡ್ಯಾಂ ಮತ್ತು ತವಂದಿ ಕೆರೆಗೆ ಭದ್ರಾ ನೀರು ತುಂಬಿಸುವುದರಿಂದ ಹಿರಿಯೂರು ನಗರ ಮತ್ತು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರ ಕುಡಿವ ನೀರಿಗೆ ಅನುಕೂಲವಾಗಲಿದೆ ಈ ಬಗ್ಗೆ ಶಾಸಕರು ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಎ.ಮಂಜುನಾಥ್ ಒತ್ತಾಯಿಸಿದರು.

           ನಗರಸಭೆ ಕೆಲ ಅಧಿಕಾರಿಗಳಿಗೆ ನಗರದ ವಾರ್ಡ್, ರಸ್ತೆಗಳ ಪರಿಚಯ ಇಲ್ಲವೆಂದರೆ ಜನರ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರೆ ಎಂದು ಸದಸ್ಯ ಜಬೀವುಲ್ಲಾ ಪ್ರಶ್ನಿಸಿದರು.

          ಬಜೆಟ್ ವಿವರ : 2019-20 ನೇ ಸಾಲಿನ 83.78 ಕೋಟಿ ಬಜ್ಟ್ ಮಂಡಿಸಲಾಗಿದೆ. ಜಮಾ 66.55 ಕೋಟಿ ಸೇರಿ ಒಟ್ಟಾರೆ 18.23 ಕೋಟಿ ರೂ ಉಳಿತಾಯ ಬಜೆಟ್ ಅನ್ನು ಬಹುಮತದಿಂದ ಅಂಗೀಕರಿಸಲಾಯಿತು. ಹಿರಿಯೂರನ್ನು ಮಹಾ ಯೋಜನೆಯಿಂದ ಸೂಕ್ಷ್ಮ ಯೋಜನೆ ತಯಾರಿಸಲು ಸರ್ಕಾರ ರಾಜ್ಯದಲ್ಲಿ 6 ಪುರಸಭೆ, ನಗರಸಭೆಗಳನ್ನು ಆಯ್ಕೆ ಮಾಡಿದ್ದು, 6 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ನಿರ್ವಹಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಯುಕ್ತ ಮಹಾಂತೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಇಮ್ರಾನಬಾನು ಪೌರಯುಕ್ತ ಮಹಂತೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap