ಹಿರಿಯೂರು :
ಮನಸ್ಸನ್ನು ಪರಿಶುದ್ದಗೊಳಿಸಿ ಪಾಪಕಾರ್ಯಗಳನ್ನು ಮಾಡದೆ ಕೌಶಲ್ಯವನ್ನು ಸಂಪಾದಿಸಿದರೆ ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯ ಎಂಬುದಾಗಿ ಆಂಗ್ಲ ಭಾಷಾ ಉಪನ್ಯಾಸಕ ಶಾಂತಕುಮಾರ್ ಹೇಳಿದರು.
ನಗರದ ಡಾ||ಬಿ.ಆರ್.ಅಂಬೇಡ್ಕರ್ ಪದವಿಪೂರ್ವ ಕಾಲೇಜಿನಲ್ಲಿ ಗೌತಮಬುದ್ದ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬುದ್ದಪೂರ್ಣಿಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಬುದ್ದ” ಎಂದರೆ ಅರಿವನ್ನು ಸಂಪಾದಿಸಿದವನು ಎಂದು ಅರ್ಥ ಬುದ್ದನ ಮುಖ್ಯ ಉಪದೇಶವೆಂದರೆ, ಈ ಪ್ರಪಂಚ ದುಖ:ದಿಂದ ಕೂಡಿದೆ, ಈ ದುಖ:ದಿಂದ ಹೊರಬರುವ ಮಾರ್ಗವನ್ನು ತೋರಿಸಿದ ಬುದ್ದನ ಉಪದೇಶಗಳು ಪ್ರಸ್ತುತ ಸಮಾಜದಲ್ಲಿ ಅನಿವಾರ್ಯ ಹಾಗೂ ಅಗತ್ಯ ಎಂದರಲ್ಲದೆ ಮನುಷ್ಯನಿಗೆ ಅವಶ್ಯಕವಾದ ಕರುಣೆ, ಪ್ರೀತಿ, ಮೈತ್ರಿಯನ್ನು ಬೋದಿಸಿದ ವiಹಾಮಾನವತಾವಾದಿ ಬುದ್ದ ಎಂಬುದಾಗಿ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌತಮಬುದ್ದ ಪ್ರತಿಷ್ಠಾನದ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ವಹಿಸಿದ್ದರು, ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಂಗಪ್ಪ, ನಾಗೇಂದ್ರಪ್ಪ, ಲೋಕೇಶ, ಮಂಜು, ರಜಾಕ್, ಮುಖ್ಯ ಶಿಕ್ಷಕಿ ವೈಶಾಲಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
