ಬಜೆಟ್ ಪೂರ್ವ ಭಾವಿ ಸಭೆ

ಗುಬ್ಬಿ

       ಪಟ್ಟಣದ ಸರ್ವತೋಮುಖ ಅಭಿವೃಧ್ದಿಯ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ರಸ್ತೆ.ಚರಂಡಿ ಮುಂತಾದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಮುಂದಾಗುವಂತೆ ಪಟ್ಟಣದ ನಾಗರೀಕರು ಸಭೆಯ ಗಮನಕ್ಕೆ ತಂದರು.

        ಪಟ್ಟಣದ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಚರ್ಚಿಸಿದ ಪಟ್ಟಣ ಪಂಚಾಯ್ತಿ ಸದಸ್ಯರು ಮತ್ತು ನಾಗರೀಕರು ಮುಂಬರುವ ಬಜೆಟ್‍ನಲ್ಲಿ ಪಟ್ಟಣದ ಸಮಗ್ರ ಅಭಿವೃಧ್ದಿಯ ಜೊತೆಗೆ ಸಾರ್ವಜನಿಕ ಸ್ಮಶಾನಕ್ಕೆ ರಸ್ತೆ, ಕಸವಿಲೇವಾರಿ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಅಭಿವೃಧ್ದಿ ಕಾರ್ಯಗಲಿಗೆ ಅಗತ್ಯವಿರುವ ಅನುದಾನ ಬಳಕೆಮಾಡಲು ತಿಳಿಸಿದರು.

       ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿ ಸಮರ್ಪಕವಾಗಿ ಕಸನಿರ್ವಹಣೆಗೆ ಮತ್ತೆರಡು ಆಟೋಗಳನ್ನು ಖರೀದಿಸುವಂತೆ ಸದಸ್ಯ ಸಿ.ಮೋಹನ್ ತಿಳಿಸಿದರು. ತುಂಬಾ ಹಳೇಯದಾದ ಓವರ್ ಹೆಡ್ ಟ್ಯಾಂಕ್‍ನ್ನು ಬದಲಿಸಿ ಹೊಸದಾಗಿ ಟ್ಯಾಂಕ್ ನಿರ್ಮಾನಕ್ಕೂ ಒತ್ತಾಯಿಸಿದರು. ಸಂತೆ ಸುಂಕ ವಸೂಲಿಯಲ್ಲಿ ದೌರ್ಜನ್ಯ ಕಾಣುತ್ತಿದೆ ಬಡ ರೈರು ಮತ್ತು ಮಾರಾಟಗಾರರ ಬಳಿ ಮನಬಂದತೆ ಸುಂಕ ವಸೂಲಿ ಮಾಡುತ್ತಿದ್ದಾರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

      ಸುಂಕ ವಸೂಲಾತಿ ಬಗ್ಗೆ ಮಾಹಿತಿಯ ನಾಮ ಫಲಕ ಹಾಕಬೇಕೆಂದು ಸೂಚಿಸಿದರು.ತಹಸಿಲ್ದಾರ್ ಮಮತಾ ಮಾತನಾಡಿ ಪಟ್ಟಣದ ಅಭಿವೃಧ್ದಿಯ ಜೊತೆಗೆ ಪಟ್ಟಣದ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಮುಂಬರುವ ಬಜೆಟ್‍ನಲ್ಲಿ ಅಗತ್ಯವಿರುವನುದಾನ ಬಳಕೆ ಮಾಡಿಕೊಳ್ಳಲಾಗುವುದು ಪಟ್ಟಣದ ಸಮಸ್ಯೆಗಳು ಸೇರಿದಂತೆ ಅಭಿವೃಧ್ದಿಯ ಬಗ್ಗೆ ಉತ್ತಮ ಸಲಹೆ ಮತ್ತು ಸಹಕಾರ ನೀಡಿದ ಪಟ್ಟಣ ಪಂಚಾಯ್ತಿ ಸದಸ್ಯರು ಮತ್ತು ಪಟ್ಟಣದ ನಾಗರಿಕರನ್ನು ಶ್ಲಾಘಿಸಿದರು.

        ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗೇಂದ್ರ, ಲೆಕ್ಕಾಧಿಕಾರಿ ಜಯಣ್ಣ, ಆರೋಗ್ಯ ನಿರೀಕ್ಷಕ ಆಂಜಿನಪ್ಪ, ಕಂದಾಯ ನಿರೀಕ್ಷಕ ಲೋಕನಾಥ್, ಸಿಬ್ಬಂದಿ ಪ್ರೀತಂ ಮುಂತಾದವರು ಭಾಗವಹಿಸಿದ್ದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap