ಹುಳಿಯಾರು:
ಹುಳಿಯಾರು ಹೋಬಳಿಯ ಯಳನಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಿಕಲ್ಲುಗೊಲ್ಲರಹಟ್ಟಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವಂತೆ ಗ್ರಾಮದ ದೇವರಾಜು ಮನವಿ ಮಾಡಿದ್ದಾರೆ.
ಗ್ರಾಮದಲ್ಲಿ ಹಾಲಿ ಸಿಗುತ್ತಿರುವ ಕೊಳವೆ ಬಾವಿ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದು ಈ ನೀರಿನ ಸೇವನೆಯಿಂದ ಕೈಕಾಲು ನೋವು, ಮಂಡಿ ನೋವು, ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು ಸೇರಿದಂತೆ ಅನೇಕ ತೊಂದರೆಗಳಾಗುತ್ತವೆ.
ಈಗಾಗಲೇ ಇಲ್ಲಿರುವ 80 ಕುಟುಂಬ 686 ಜನರಲ್ಲಿ ಅನೇಕರಿಗೆ ತೊಂದರೆ ಸಹ ಆಗಿದೆ. ಆದರೆ ಇಲ್ಲಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸದೆ ನಿರ್ಲಕ್ಷ್ಯಿಸಿದ್ದಾರೆ. ಪ್ಲೋರೈಡ್ ನೀರಿನ ದುಷ್ಪರಿಣಾಮಕ್ಕೆ ಹೆದರಿ ಕೆಲವರು 3 ಕಿ.ಮೀ.ದೂರದ ತಮ್ಮಡಿಹಳ್ಳಿ ಗ್ರಾಮದ ಶುದ್ಧ ನೀರಿನ ಘಟಕದಿಂದ ನೀರು ತರುತ್ತಿದ್ದಾರೆ. ಕೆಲವರು ಪ್ಲೂರೈಡ್ ನೀರೆ ಕುಡಿಯುತ್ತಿದ್ದಾರೆ.
ಹಾಗಾಗಿ ಬಿಳಿಕಲ್ಲು ಗೊಲ್ಲರಹಟ್ಟಿಗೆ ಶುದ್ಧ ನೀರಿನ ಘಟಕ ಸ್ಥಾಪಿಸಿ ಪ್ಲೂರೈಡೆ ನೀರು ಕುಡಿಯುವುದನ್ನು ತಪ್ಪಿಸುವ ಜೊತೆಗೆ 3 ಕಿ.ಮೀ ದೂರದ ತಮ್ಮಡಿಹಳ್ಳಿಗೆ ಓಡಾಡುವುದನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ.ದೇವರಾಜ್, ಬಿಳಿಕಲ್ಲುಗೊಲ್ಲರಹಟ್ಟಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ