ವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ಮಾಡಲು ಆಗ್ರಹ

ಹುಳಿಯಾರು:

     ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ವ್ಯಾಪ್ತಿಯ ಸೋಮನಹಳ್ಳಿ ಮಜುರೆ ರಂಗನಕೆರೆ ಗ್ರಾಮದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮಾಡಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಇಲ್ಲಿನ ನಿವಾಸಿ ವಿರೂಪಾಕ್ಷಯ್ಯ ಅವರು ಮನವಿ ಮಾಡಿದ್ದಾರೆ.

     ಮಳೆಗಾಲದಲ್ಲಿ ಮೇಲ್ಭಾಗದ ತೋಟದ ಕಡೆಯಿಂದ ಮಳೆಯ ನೀರು ರಂಗನಕೆರೆ ಗ್ರಾಮಕ್ಕೆ ಹರಿದು ಬಂದು ಬಹಳ ತೊಂರೆಯಾಗುತ್ತಿತ್ತು. ಹಾಗಾಗಿ ಸೂಕ್ತ ಚರಂಡಿ ಮಾಡಿಸಿ ಈ ಸಮಸ್ಯೆಗೆ ಮುಕ್ತಿ ಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿ ದಸೂಡಿ-ಸೋಮನಹಳ್ಳಿ ಮುಖ್ಯರಸ್ತೆಯಿಂದ ಚರಂಡಿ ಕಾಮಗಾರಿ ಆರಂಭಿಸಿದ್ದಾರೆ.

     ಆದರೆ ಈ ಕಾಮಗಾರಿಯೂ ಅವೈಜ್ಞಾನಿಕವಾಗಿ ಮಾಡಲಾಗುತ್ತಿದ್ದು ತಗ್ಗಿಗೆ ಮಣ್ಣು ಹೊಡೆದು ಎತ್ತರ ಮಾಡಿ ನೀರು ಸರಾಗವಾಗಿ ಹರಿಯವಂತೆ ಡೌನ್ ಕೊಟ್ಟು ಕಾಮಗಾರಿ ಮಾಡಬೇಕಿದೆ. ಆದರೆ ತಗ್ಗಿನಲ್ಲಿ ಮಾಡುತ್ತಿರುವುದರಿಂದ ನೀರು ಯಾವ ಕಡೆಯೂ ಹರಿದು ಹೋಗುಗೆ ಪುನಃ ಊರಿನೊಳಗೆ ನುಗ್ಗುತ್ತದೆ. ಇದರಿಂದಾಗಿ ಬಹು ನಿರೀಕ್ಷಿತ ಯೋಜನೆ ವಿಫಲವಾಗುವ ಸಾಧ್ಯತೆ ಇದೆ.

    ಈ ಕಾಮಗಾರಿಯು ಯಾವ ಯೋಜನೆಯಲ್ಲಿ ನಿರ್ಮಾಣವಾಗುತ್ತಿದೆ. ಎಷ್ಟು ಅಂದಾಜು ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ ಎನ್ನುವ ಕನಿಷ್ಟ ಮಾಹಿತಿ ಗ್ರಾಮಕ್ಕೆ ತಿಳಿಸಿಲ್ಲ. ಒಬ್ಬರು ಎತ್ತಿನಹೊಳೆ ಯೋಜನೆ ಎಂದರೆ ಮತ್ತೊಬ್ಬರು ಹೇಮಾವತಿ ಯೋಜನೆಯ ಹಣ ಎನ್ನುತ್ತಾರೆ. ಇನ್ನು ಗುತ್ತಿಗೆದಾರರು ಇದೂವರೆವಿಗೂ ಇತ್ತ ಸುಳಿದಿಲ್ಲ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗುಣಮಟ್ಟದ ಕಾಮಗಾರಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿರೂಪಾಕ್ಷಪ್ಪ ಮನವಿ ಮಾಡಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap