ಕೌಶಲ್ಯ ತರಬೇತಿ ಪಡೆದು ಬದುಕು ಕಟ್ಟಿಕೊಳ್ಳಿ

ಚಿತ್ರದುರ್ಗ;

          ಮುಂದಿನ ದಿನಗಳಲ್ಲಿ ಕಟಡ ಕಾಮಗಾರಿ ಅಂತಹ ಕೆಲಸಗಳಿಗೂ ತರಬೇತಿ ನೀಡುವ ಸೌಲಭ್ಯ ಬರುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಪಿ.ಎಂ.ರುದ್ರಯ್ಯ ಹೇಳಿದರು.

           ನಗರದ ಹೊರವಲಯದ ಬಾಪೂಜಿ ಸಮೂಹ ಸಂಸ್ಥೆಗಳ ಆವರಣದಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ತರಬೇತಿ ಯೋಜನೆ ಅಡಿಯಲ್ಲಿ ಬಾಪೂಜಿ ಸಮೂಹ ಸಂಸ್ಥೆಯಲ್ಲಿ ಪ್ರಾರಂಭವಾದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ನಿರುದ್ಯೋಗಿ ಯುವಕ ಯುವತಿಯರಿಗೆ ಇಂತಹ ತರಬೇತಿ ಕಾರ್ಯಗಾರಗಳು ತುಂಬ ಉಪಯುಕ್ತವಾಗಿವೆ. ಕೆಲವರು ವಿದ್ಯಾಭ್ಯಸ ಮುಗಿಸಿದರು ಒಳ್ಳಯ ಕೆಲಸ ಸಿಗದೆ ಪರದಾಡುತ್ತಾರೆ.

           ಅವರು ಇಂತಹ ಕೌಶಲ್ಯ ತರಬೇತಿ ಪಡೆದು ಸ್ವಾವಲಂಭಿ ಜೀವನ ನಡೆಸಬಹುದು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಲಸಕ್ಕೂ ತರಬೇತಿ ನೀಡುವ ಯೋಜನೆಗಳು ಬರುತ್ತವೆ. ಕಟಡ ಕಾಮಗಾರಿ, ನಲ್ಲಿ ರಿಪೇರಿ ಕೆಲಸ, ಬಣ್ಣ ಹಚ್ಚುವ ಕೆಲಸ, ಮೊಬೈಲ್ ರಿಪೇರಿ ಹೀಗೆ ನಾನಾ ಕೆಲಸಗಳಿಗೆ ತರಬೇತಿ ನೀಡಿ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಸರಕಾರ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ನಾನಾ ಯೋಜನೆಗಳನ್ನು ರೂಪಿಸಿದೆ. ಅದರ ಪ್ರಯೋಜನ ಪಡೆದುಕೊಳ್ಳಿ. ಕೌಶಲ್ಯ ಇದ್ದವರು ಎಲ್ಲಿ ಬೇಕಾದರು ಸ್ವಂತ ಉದ್ಯೋಗ ಮಾಡಬಹುದು. ವಿದ್ಯೆಯ ಜೊತೆ ಕೌಶಲ್ಯ ಇದ್ದರೆ ಉದ್ಯೋಗ ಬೇಗ ಪಡೆಯಬಹುದು. ಪ್ರತಿಯೊಬ್ಬರಿಗೂ ಸರಕಾರಿ ಕೆಲಸ ಸಿಗಲು ಸಾಧ್ಯವಿಲ್ಲ ಆದ್ದರಿಂದ ನಿಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳಿ ಎಂದರು.

          ಬಾಪೂಜಿ ಸಮುಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೆಶ್ ಮಾತನಾಡಿ, ಇಂದಿನ ವೇಗದ ಕಾಲದಲ್ಲಿ ಕೌಶಲ್ಯ ಇದ್ದವರು ಬೇಗ ಜೀವನದಲ್ಲಿ ಗುರಿ ತಲುಪುತ್ತಾರೆ. ಕೌಶಲ್ಯ ತರಬೇತಿ ನೀಡುವ ಮೂಲಕ ನಿರುದ್ಯೋಗಿ ಸಮಸ್ಯೆಯನ್ನು ತಡೆಯಬಹುದು. ಸಮಾಜದಲ್ಲಿ ಕೌಶಲ್ಯ ಇದ್ದವರಿಗೆ ಉನ್ನತ ಸ್ಥಾನ ದೊರೆಯುತ್ತದೆ. ನಮ್ಮ ಸಂಸ್ಥೆಯಲ್ಲಿ ಹೆಲ್ಪರ್ ಎಲೆಕ್ಟ್ರೀಷನ್, ಅಸಿಸ್ಟೆಂಟ್ ಎಲೆಕ್ಟ್ರೀಷನ್, ಡೊಮೆಸ್ಟಿಕ್ ಡಾಟಾ ಎಂಟ್ರಿ ಹಾಗೂ ಸೋಲಾರ ಪೆನಲ್ ಇನ್‍ಸ್ಟಾಲೇಶನ್ ಕೋರ್ಸ್‍ಗಳನ್ನು ಪ್ರಾರಂಭಿಸಿಲಾಗಿದೆ. ನಿರುದ್ಯೋಗ ಯುವಕ ಯುವತಿಯರು ಇದರ ಲಾಭ ಪಡೆದು ಜೀವನದಲ್ಲಿ ತಮ್ಮ ಗುರಿ ಸಾಸಲ್ಲಿ ಎಂದರು.

          ಬಾಪೂಜಿ ದೂರಶಿಕ್ಷಣದ ಸಂಯೋಜನಾಕಾರಿ ಎ.ಎಂ.ರುದ್ರಪ್ಪ, ಕೆ.ಎಂ.ಎಸ್.ಪಿಯು ಕಾಲೇಜಿನ ಪ್ರಾಚಾರ್ಯ ಜಂಬುನಾಥ್, ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ತರಬೇತಿ ಯೋಜನೆ ಗುರುಮೂರ್ತಿ, ನದೀಮ, ಉಪನ್ಯಾಸಕರಾದ, ಬ್ರಮರಾಂಭ, ಅನೂಷ, ದೀಪ, ಯಶವಂತ, ಬಿ.ಟಿ.ಪ್ರಾಣೇಶ್ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap