ನವದೆಹಲಿಯಲ್ಲಿ : 42 ಮೀಟರ್‍ಗಿಂತ ಎತ್ತರದ ಕಟ್ಟಡದ ನಿರ್ಮಾಣಕ್ಕೆ ಬ್ರೇಕ್

ನವದೆಹಲಿ:

     ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನು ಮಂದೆ 42 ಮೀಟರ್‍ಗಿಂತ ಎತ್ತರದ ಕಟ್ಟಡ ನಿರ್ಮಿಸುವಂತಿಲ್ಲ. ಕೇಂದ್ರೀಯ ಭಾಗದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು, ನೂತನ ಸಂಸತ್ ಭವನ, ರಾಜಪಥವನ್ನು ನವೀಕರಣಗೊಳಿಸಲಾಗುತ್ತಿದ್ದು, ಎಲ್ಲ ಕಟ್ಟಡಗಳು ಕೂಡ ಏಕರೂಪತೆಯಿಂದ ಕೂಡಿರಲು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

     ಐತಿಹಾಸಿಕ ದೆಹಲಿ ಗೇಟ್ 42 ಮೀಟರ್ ಎತ್ತರವಿದ್ದು, ಮುಂದೆ ನಿರ್ಮಾಣವಾಗುವ ಯಾವುದೇ ಕಟ್ಟಡಗಳು ಇದಕ್ಕಿಂತ ಒಂದು ಇಂಚು ಎತ್ತರ ಕೂಡ ಇರುವಂತಿಲ್ಲ.

     ಈ ಮೂರು ಕಟ್ಟಡಗಳ ನಿರ್ಮಾಣದ ಗುತ್ತಿಗೆ ಗುಜರಾತ್ ಮೂಲದ ಎಚ್‍ಸಿಪಿ ಡಿಸೈನ್ ಸಂಸ್ಥೆಗೆ ನೀಡಲಾಗಿದೆ. 2022ಕ್ಕೆ 75ನೇ ಸ್ವಾತಂತ್ರೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಸತ್ ಭವನವನ್ನು ಈ ಅವಧಿಯೊಳಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಉಳಿದ ಕಟ್ಟಡಗಳನ್ನು 2024ಕ್ಕೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಸುಮಾರು 12 ಸಾವಿರ ಕೋಟಿ ರೂ.ವೆಚ್ಚದ ಯೋಜನೆ ಇದಾಗಿದೆ.ರಾಷ್ಟ್ರಪತಿ ಭವನವು 345 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ 60 ಎಕರೆಯಲ್ಲಿ ಜೈವಿಕ ಉದ್ಯಾನ ನಿರ್ಮಿಸಲು ಪ್ರಸ್ತಾವನೆ ಇದೆ. ಜೊತೆಗೆ ಉಪರಾಷ್ಟ್ರಪತಿ ಹಾಗೂ ಪ್ರಧಾನಿ ನಿವಾಸವನ್ನು ಕೂಡ ನವೀಕರಿಸುವ ಸಾಧ್ಯತೆ ಇದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap