ಗೂಳಿಯ ಆರ್ಭಟಕ್ಕೆ ದಿಕ್ಕಪಾಲಾದ ಪಟ್ಟಣದ ಜನತೆ

ಕೊಟ್ಟೂರು .

         ಕೊಟ್ಟೂರೇಶ್ವರ ಸ್ವಾಮಿಯ ಹರಕೆಯ ಗೂಳಿ (ಪೇಟೆ ಬಸವ) ದಿಢೀರನೆ ಜನರ ಮೇಲೆ ದಾಳಿ ಮಾಡಿದ್ದರಿಂದ ಕೆಲ ತಾಸುಗಳ ಕಾಲ ಪಟ್ಟಣದಲ್ಲಿ ಉಜ್ಜಿನಿ ಸರ್ಕಲ್, ವಿಠಲ್ ಸರ್ಕಲ್, ಬಸ್ ನಿಲ್ದಾಣದಲ್ಲಿ ಉದ್ವಿಗ್ವ ಸ್ಥಿತಿ ಉಂಟಾಗಿತ್ತು.

       ತುಂಬ ಪ್ರಾಯದ ಗೂಳಿ ಪ್ರೌಢಾವಸ್ಥೆಗೆ ಬಂದಿರುವುದರಿಂದ ಇದ್ದಕ್ಕಿದ್ದಂತೆ ಪಾದಚಾರಿಗಳನ್ನು ಬೆನ್ನಟ್ಟಿ ಕೋಡಿನಿಂದ ತಿವುದು ಗಾಯಗೊಳಿಸಿದಾಗ ಈ ಭಾಗದ ಜನರು ಹೌಹಾರಿದ್ದರು.

       ಯಾರ ಹಿಡಿತಕ್ಕೂ ಸಿಗದೆ ಗೂಳಿ ಸಿಟ್ಟಿಗೆದ್ದ ಸಂದರ್ಭದಲ್ಲಿ ದ್ವಿಚಕ್ರದಲ್ಲಿ ಹೋಗುತ್ತಿದ್ದವರನ್ನು ಬೆನ್ನತ್ತಿ ಕೋಡಿನಿಂದ ತಿವಿದು, ಮೇಲಕ್ಕೆ ಚಿಮ್ಮಿತು. ಗಾಳಿಯಲ್ಲಿ ಒಂದು ಸುತ್ತು ತಿರುಗಿದ ಆಮಹಿಳೆ ನೆಲ್ಲಕ್ಕೆ ಬಿದ್ದಳು.ಆದರೆ ಅದೃಷ್ಟವಶಾತ ಏನು ಆಗಲಿಲ್ಲ. ತಕ್ಷಣ ಗೂಳಿ ಬೇರೆಕಡೆ ಲಕ್ಷ್ಯವಹಿಸಿದ್ದರಿಂದ ಬೈಕ್ ಏರಿ ಅವರು ಪರಾರಿಯಾದರು.

         ಈ ದೃಶ್ಯದಿಂದ ತೀರ ಭಯಗೊಂಡ ಜನರು ತಕ್ಷಣ ಪೋಲೀಸರಿಗೆ ಮತ್ತು ಕೊಟ್ಟೂರೇಶ್ವರ ಮಠದ ಧರ್ಮಾಧಿಕಾರಿಗೆ ಹಾಗೂ ಪಶುವೈದ್ಯಾಧಿಕಾರಿ ರವಿಕುಮಾರ ಕಿತ್ತೂರು ಮಾಹಿತಿ ನೀಡಿದರು.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಾ. ರವಿಪ್ರಕಾಶ ಕಿತ್ತೂರು, ಜನರ ಸಹಕಾರ ಪಡೆದು ಚಾಣಾಕ್ಷ ತನದಿಂದ ಗೂಳಿಗೆ ಅರವಳಿಕೆ ಚುಚ್ಚು ಮದ್ದು ನೀಡಿದ ಮೇಲೆ ಗೂಳಿ ಹತೋಟೆಗೆ ಬಂದಿತು
.

        ಈ ಗೂಳಿಯನ್ನು ಬೇರೆ ಸಾಗಿಸಲು ಮಠದದವರು ಚಿಂತನೆ ನಡೆಸಿದ್ದು, ಟೆಂಪು ಹತ್ತಿಸಲು ಸಾರ್ವಜನಿಕರು ಹರ ಸಾಹಸ ಮಾಡಬೇಕಾಯಿತು .ಕೊಟ್ಟೂರೇಶ್ವರ ಸ್ವಾಮಿಗೆ ಭಕ್ತರು ಹರಿಕೆಯ ರೂಪದಲ್ಲಿ ಚಿಕ್ಕ ವಯಸ್ಸಿನ ಹಸುವಿನ ಕರುಗಳನ್ನು ಬೀಡುವುದು ರೂಢಿ, ಹೀಗೆ ಭಕ್ತರು ಸ್ವಾಮಿಗೆ ಅರ್ಪಿಸಿದ ನೂರಾರು ಗೂಳಿಗಳು ಪಟ್ಟಣದಲ್ಲಿವೆ.

        ಇಂತಹ ಹರಕೆಯ ಗೂಳಿ ಮತ್ತು ಹಸುಗಳಿಗಾಗಿ ಕೊಟ್ಟೂರೇಶ್ವರ ಸ್ವಾಮಿ ಮಠದ ಆಡಳಿತ ಮಂಡಳಿ ಹಾಗೂ ಧರ್ಮಕರ್ತರು ಪಟ್ಟಣದ ಇಟಗಿ ರಸ್ತೆಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು, ಅದೀಗ ನೆನೆಗುದಿಗೆ ಬಿದ್ದಿದೆ.ಕೊಟ್ಟೂರೇಶ್ವರ ಮಠದ ಆಡಳಿತ ಮಂಡಳಿ ಹಾಗೂ ಧರ್ಮಕರ್ತರು ಕೂಡಲೆ ಭಕ್ತರ ಹರಕೆಯ ಗೂಳಿ ಮತ್ತು ಹಸುಗಳಿಗೆ ತಕ್ಷಣ ಗೋಶಾಲೆ ನಿರ್ಮಿಸಬೇಕೆಂಬುದು ಭಕ್ತರ ಆಗ್ರಹ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap