ದಾವಣಗೆರೆ:
ಸತತ 58 ದಿನಗಳ ಬಳಿಕ ಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಕೊರೋನಾ ವೈರಸ್ ಭೀತಿಯ ಮಧ್ಯೆಯೂ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಮಂಗಳವಾರ ಬೆಳಗ್ಗೆಯಿಂದ ನಗರ, ಜಿಲ್ಲೆಯಲ್ಲಿಸಂಚಾರ ಆರಂಭಿಸಿವೆ.
ನಗರದ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದಲ್ಲಿ ಪ್ರತಿ ಬಸ್ಸಿಗೆ 25-30 ಜನರಂತೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗದ್ದು, ಪ್ರತಿ ಬಸ್ಸು ಚಾಲಕ-ನಿರ್ವಾಹಕರಿಗೆ ಮನೆಯಿಂದಲೇ ಊಟ ಕಟ್ಟಿಕೊಂಡು ಬರುವಂತೆ ಸೂಚನೆ ನೀಡುವ ಮೂಲಕ ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಸ್ಕ್ರೀನಿಂಗ್, ಸ್ಯಾನಿಟೇಸೇಷನ್ ಸೇರಿದಂತೆ ಪ್ರಯಾಣಿಕರತಪಾಸಣೆ ಹಾಗೂ ಸಂಸ್ಥೆ ನೌಕರರ ಕಾಳಜಿ ಸಮೇತ ಬಸ್ಸು ಸೇವೆಗೆ ಚಾಲನೆ ನೀಡಲಾಯಿತು.ಸಂಸ್ಥೆಯ ಬಸ್ಸುಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿದ್ದವರುತಮ್ಮ ಪ್ರಯಾಣಕ್ಕೆಎಲ್ಲಾ ಸಿದ್ಧತೆಯೊಂದಿಗೆ ಆಗಮಿಸಿದ್ದರು.
ಈವರೆಗೆ ಸುಮಾರು 420 ಜನರು ಬಸ್ಸು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿಕೊಂಡಿದ್ದರು.ಆ ಎಲ್ಲರಗೂ ಬಸ್ಸು ನಿಲ್ದಾಣದ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಒಳ ಬಿಡಲಾಗುತ್ತತ್ತು.ಅಲ್ಲದೇ, ಪ್ರಯಾಣಕರ ಗುರುತಿನ ಪತ್ರ, ಮೊಬೈಲ್ ನಂಬರ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ದಾಖಲಿಸಿಕೊಳ್ಳುವುದು ಕಂಡು ಬಂದಿತು.
ಜಿಲ್ಲಾ ಕೇಂದ್ರದಿಂದ ಒಟ್ಟು 50 ಬಸ್ಸುಗಳು ಸೇವೆ ಆರಂಭಿಸಿದ್ದು, ಈ ಪೈಕ 10 ನಗರಸಾರಿಗೆ ಬಸ್ಸುಗಳಾಗಿವೆ. ಚಾಲಕ, ನಿರ್ವಾಹಕ, ಪ್ರಯಾಣಿಕರು ಹೀಗೆ ಎಲ್ಲರೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಪ್ರತಿ ಬಸ್ಸಿಗೆ 25-30 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ನಿತ್ಯವೂ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಬಸ್ಸು ಸಂಚಾರಕ್ಕೆಅನುಮತಿ ನೀಡಲಾಗಿದೆ.ದಾವಣಗೆರೆಯಿಂದ ಬೆಂಗಳೂರು ಸೇರಿದಂತೆ ಮುಖ್ಯ ಮಾರ್ಗಗಳಿಗೆ ಮಾತ್ರವೇ ಬಸ್ಸು ಸೇವೆ ಸದ್ಯಕ್ಕೆ ಕಲ್ಪಿಸಿದೆ.ಸಂಜೆ 5ರ ಹೊತ್ತಿಗೆ ಬಸ್ಸು ಸಂಚಾರ ಸ್ಥಗಿತಗೊಳಿಸಿದ್ದು, ಮತ್ತೆ ಬುಧವಾರ ಬೆಳಿಗ್ಗೆ 7ರಿಂದ ಬಸ್ಸು ಸಂಚಾರ ಪುನಾರಂಭಗೊಳ್ಳಲಿದೆ.
ಮೊದಲ ದಿನವೇ ಬೆಂಗಳೂರು, ಚಿತ್ರದುರ್ಗ ಕಡೆಗೆ ಸಾಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಬೆಂಗಳೂರು ಮಾರ್ಗಕ್ಕೆ 15, ಚಿತ್ರದುರ್ಗ ಕಡೆಗೆ 5, ರಾಣೆಬೆನ್ನೂರು ಮಾರ್ಗವಾಗಿ 5, ಶಿವಮೊಗ್ಗ, ಹೊಸಪೇಟೆ, ಹರಿಹರ ಸೇರದಂತೆ ವಿವಿಧ ಮಾರ್ಗಕ್ಕೆ 5 ಬಸ್ಸುಗಳ ಸೇವೆಯನ್ನು ಆರಂಭಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ