ಬಸ್ ದರ ಏರಿಕೆ ವಿರೋಧಿಸಿ ಬೀದಿಗೀಳಿದ ಎಬಿವಿಪಿ ವಿದ್ಯಾರ್ಥಿಗಳು

ಚಳ್ಳಕೆರೆ

      ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಆಧಾರಸ್ತಂಭವಾಗಿರುವ ಶಿಕ್ಷಣವನ್ನು ಕಲಿಯುವಲ್ಲಿ ಇಂದಿನ ವಿದ್ಯಾರ್ಥಿಗಳು ಜಾಗೃತರಾಗಿದ್ದು, ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಶಿಕ್ಷಣದ ಬಗ್ಗೆ ಹೆಚ್ಚು ವಿಶ್ವಾಸವನ್ನು ಹೊಂದಿದ್ದು, ತಮ್ಮ ಅನೇಕ ಸಮಸ್ಯೆಗಳ ನಡುವೆಯೂ ಸಹ ಶಾಲಾ ಕಾಲೇಜುಗಳಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಅವಲಂಬಿಸಿದ್ದು, ರಾಜ್ಯಸರ್ಕಾರ ವಿದ್ಯಾರ್ಥಿಗಳ ವಾಸ್ತವ ಸ್ಥಿತಿಯನ್ನು ಅರಿಯದೆ ಏಕಾಏಕಿ ಬಸ್ ಪಾಸ್ ಶುಲ್ಕವನ್ನು ಹೆಚ್ಚಳ ಮಾಡಿರುವುದನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಖಂಡಿಸಿದೆ ಎಂದು ತಾಲ್ಲೂಕು ಸಂಚಾಲಕ ಭಾನುಪ್ರಸಾದ್ ತಿಳಿಸಿದರು.

        ಅವರು, ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಬಸ್ ಪಾಸ್ ದರ ಏರಿಕೆ ವಿರುದ್ದ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಗೆ ಮನವಿ ಅರ್ಪಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಸರ್ಕಾರ ಕೆಎಸ್‍ಆರ್‍ಟಿಸಿ ವಿದ್ಯಾರ್ಥಿಗಳ ಪಾಸ್ ದರವನ್ನು ಹೆಚ್ಚಿಸದೆ ಸಹಕರಿಸಿತ್ತು. ಪ್ರಸ್ತುತ ವರ್ಷವೂ ಸಹ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಸಾರಿಗೆ ಸಂಸ್ಥೆ ಬಸ್‍ಗಳನ್ನೇ ಅವಲಂಬಿಸಿದ್ದು, ಪಾಸ್ ಪಡೆದು ನಿತ್ಯ ಶಾಲಾ ಕಾಲೇಜುಗಳಿಗೆ ಅಭ್ಯಾಸಕ್ಕಾಗಿ ಓಡಾಡುತ್ತಾರೆ.

      ಆದರೆ, ರಾಜ್ಯ ಸರ್ಕಾರ ಯಾವುದೇ ಸೂಚನೆ ಇಲ್ಲದೆ ಕೇವಲ ವಿದ್ಯಾರ್ಥಿಗಳ ಪಾಸ್ ದರವನ್ನು ಸಹ ಹೆಚ್ಚಿಸಿರುವುದು ಖಂಡನೀಯ. ಈ ಕೂಡಲೇ ಹೆಚ್ಚಿಸಿದ ದರವನ್ನು ವಾಪಾಸ್ ಪಡೆಯಬೇಕೆಂದು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ಧಾರೆ.

      ಪ್ರತಿಭಟನೆಗೂ ಮುನ್ನ ವಿದ್ಯಾರ್ಥಿ ಪರಿಷತ್‍ನ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಚ್‍ಪಿಪಿಸಿ ಕಾಲೇಜಿನಿಂದ ಮೆರವಣಿಗೆ ಹೊರಟು, ಜಗಜೀವನರಾಮ್ ವೃತ್ತ, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ ಮೂಲಕ ನೆಹರೂ ವೃತ್ತಕ್ಕೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

      ಮನವಿ ಸ್ವೀಕರಿಸಿ ಮಾತನಾಡಿದ ತºಶೀಲ್ದಾರ್ ಎಂ.ಮಲ್ಲಿಕಾರ್ಜುನ, ತಾವು ನೀಡಿರುವ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಇಂದೇ ಕಳುಹಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ವೈಭವ್‍ಬಾದ್ವಿ, ನಗರ ಎಬಿವಿಪಿ ಸಂಚಾಲರಾದ ಲವಕುಮಾರ್, ತೇಜು, ವೆಂಕಟೇಶ್, ಅಮರ್, ಶಿವು ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link