ಸ್ಮಾರ್ಟ್ ಸಿಟಿ ಯೋಜನೆಯಿಂದ ತುಮಕೂರಿನ ಸರ್ವತೋಮುಖ ಅಭಿವೃದ್ಧಿ:ಯು ಟಿ ಖಾದರ್

ತುಮಕೂರು

        ಬೆಂಗಳೂರು- ತುಮಕೂಕು ನಡುವೆ ಒಂದು ಗಂಟೆ ಪ್ರಯಾಣದ ವ್ಯವಸ್ಥೆಯಾದರೆ, ಬೆಂಗಳೂರಿನಲ್ಲಿ ವಾಸಿಸುವವರು ತುಮಕೂರು ಆಯ್ಕೆ ಮಾಡಿಕೊಂಡು ರಾಜಧಾನಿಯ ಜನ ಒತ್ತಡ ಕಡಿಮೆಯಾಗಲಿದೆ. ಈ ಕಾರಣದಿಂದ ತುಮಕೂರು ನಗರದಲ್ಲಿ ಅಗತ್ಯ ಎಲ್ಲಾ ನಾಗರೀಕ ಸೌಲಭ್ಯ ಒದಗಿಸಲು ಸರ್ಕಾರ ಬದ್ದವಾಗಿದೆ ಎಂದು ನಗರಾಭಿವೃದ್ದಿ ಸಚಿವ ಯು ಟಿ ಖಾದರ್ ಹೇಳಿದರು.

          ನಗರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತುಮಕೂರು ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದರು.

          ಈವರೆಗೆ ಆಡಳಿತ ವ್ಯವಸ್ಥೆ, ಯೋಜನೆಗಳ ಆಡಳಿತಾತ್ಮಕ ಮಂಜೂರಾತಿ ಸಿದ್ದತೆಗಳು ಮುಗಿದು ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗಳು ಇನ್ನು ಮೇಲೆ ಟೇಕಾಫ್ ಆಗಲಿವೆ. ಮೂಲಭೂತ ಸೌಕರ್ಯ ಒದಗಿಸಿ ನಗರದ ಚಿತ್ರಣ ಬದಲಾಗಲಿದೆ ಎಂದು ಹೇಳಿದರು.

        ವಿವಿಧ ಯೋಜನೆಗಳಿಗೆ 309 ಕೋಟಿ ರೂಗಳ ಟೆಂಡರ್ ಆಗಿ, ಕಾಮಗಾರಿ ಆರಂಭವಾಗಿದೆ 450 ಕೋಟಿ ರೂಗಳಯೋಜನೆಗಳಿಗೆ ಟೆಮಡರ್ ಮುಗಿಸಿ ಮಾರ್ಚ್ ವೇಳೆಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಉಳಿದ 279 ಕೋಟಿ ರೂ ಯೋಜನೆ ಸಿದ್ದವಾಗಿದ್ದು ಆಡಳಿತಾತ್ಮಕ ಮಂಜೂರಾತಿ ದೊರೆತು ಜೂನ್ ಒಳಗೆ ಕೆಲಸ ಶುರು ಮಾಡಲು ಸಿದ್ದತೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

        ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಹಾಗೂ ತಾವು ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ತುಮಕೂರು ನಗರದಲ್ಲಿ ಹೆಚ್ಚಿನ ಅಭಿವೃದ್ದಿ ಯೋಜನೆ ಕೈಗೊಳ್ಳಲು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕೋರಿರುವುದಾಗಿ ಸಚಿವ ಯು ಟಿ ಖಾದರ್ ಹೇಳಿದರು.ನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆ ಕೆಲಸ ಆರಂಭವಾಗಿದೆ, ನೀರಿಗೆ ಸಮಸ್ಯೆಯಾಗದಂತೆ ಸಕಾಲದಲ್ಲಿ ಹೇಮಾವತಿ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಈವರೆಗೆ 0.7 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತಿತ್ತು, ಮುಂದೆ 1.35 ನೀರು ಬಳಕೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

       ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯು ಸ್ಮಾರ್ಟ್‍ಸಿಟಿ ಅನುದಾನದಲ್ಲಿ 1179.38 ಕೋಟಿ ರೂಗಳ ವಿವಿಧ ಯೋಜನೆಗಳನ್ನು 5 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಪ್ರಸ್ತುತ 869.53 ಕೋಟಿ ರೂ ಯೋಜನೆಗಳ ವಿಸ್ತತ ಯೋಜನಾ ವರದಿಗಳು ತಯಾರಾಗಿದ್ದು, ತಾಂತ್ರಿಕವಾಗಿ ಅನುಮೋದನೆ ಪಡೆಯಲಾಗಿದೆ. ಅವುಗಳಲ್ಲಿ ಕೆಲವು ಈಗಾಗಲೇ ಟೆಮಡರ್ ಕರೆದಿದ್ದು, ಕೆಲವು ಯೋಜನೆಗಳು ಆಡಳಿತಾತ್ಮಕ ಅನುಮೋದನೆ ಹಂತದಲ್ಲಿದ್ದು ಶೀಘ್ರದಲ್ಲೇ ಟೆಮಡರ್ ಕರೆಯಲಾಗುವುದು ಎಂದು ಹೇಳಿದರು.
ಶಾಸಕ ಜಿ ಬಿ ಜ್ಯೋತಿಗಣೇಶ್, ಅಪರ ಜಿಲ್ಲಾದಿಕಾರಿ ಚನ್ನಬಸಪ್ಪ, ನಗರಪಾಲಿಕೆ ಆಯುಕ್ತ ಟಿ ಭೂಪಾಲನ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap