ಬೆಂಗಳೂರು:
ಸಿಟಿ ರವಿ ದಿಲ್ಲಿಗೆ ಹೋಗಿದ್ದಾರೆ ಎನ್ನುವುದಷ್ಟೇ ಅವರಿಗೆ ನನ್ನ ಹೆಸರು ಹೇಳಿದರೆ ದಿಲ್ಲಿಯಲ್ಲಿ ವರ್ಕ್ವೌಟ್ ಆಗುತ್ತದೆ ಅನ್ನಿಸುತ್ತದೆ . ಸಿ.ಟಿ ರವಿಯವರು ಈಗ ನನ್ನ ಹೆಸರು ಹೇಳಿ ದಿಲ್ಲಿಯಲ್ಲಿ ಮಾರ್ಕೆಟ್ ಮಾಡ್ಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಉಪಚುನಾವಣೆಯ ಅಧಿಕೃತ ನೋಟಿಫಿಕೇಶನ್ ಆದ ಮೇಲೆ 14ಕ್ಕೆ ಆರ್ ಆರ್ ನಗರ, ಶಿರಾ 15 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇವೆ ಎಂದರು.
ಶಿರಾದಲ್ಲಿ ರಾಕೇಶ್ ಗೌಡ ಯಾರು ಅಂತ ಗೊತ್ತಿಲ್ಲ. ಪಕ್ಷದಿಂದ ಈ ಬಾರಿ ಜಯಚಂದ್ರ ಹೆಸರಷ್ಟೆ ಕಳಿಸಿದ್ದು, ಎರಡೂ ಕ್ಷೇತ್ರದಲ್ಲಿ ಒಂದೇ ಹೆಸರು ಸೇರಿಸಿಕೊಂಡಿದ್ದೇವೆ. ಕುಸುಮಾ ಆಯ್ಕೆ ಮಾಡುವ ಮೊದಲು ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಿಸಿದ್ದೇನೆ ಎಂದು ಆಯ್ಕೆ ಪ್ರಕ್ರಿಯೆ ಬಗ್ಗೆ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ