ಪೌರತ್ವ ಕಾಯ್ದೆ ಬಗ್ಗೆ ಮನೆ ಮನೆ ಪ್ರಚಾರಾಂದೋಲನ: ಜಿಲ್ಲಾ ಸಚಿವರು

ಚಿಕ್ಕನಾಯಕನಹಳ್ಳಿ
   ಪೌರತ್ವ ಕಾಯ್ದೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಿಜೆಪಿ ವತಿಯಿಂದ ತಾಲ್ಲೂಕಿನಾದ್ಯಂತ ಮನೆ ಮನೆ ಪ್ರಚಾರಾಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
   ಪಟ್ಟಣದ ನವೋದಯ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ (ಸಿಎಎ) ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ರಾಷ್ಟ್ರೀಯ ನಾಗರೀಕ ವೇದಿಕೆ ವತಿಯಿಂದ ಜನವರಿ 7ರಂದು ಹಮ್ಮಿಕೊಂಡಿರುವ ಜಾಗೃತಿ ಜಾಥಾ ಬಗ್ಗೆ ತಿಳಿಸಿದರು.ಪೌರತ್ವ ಕಾಯ್ದೆಯಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಜನರಿಗೆ ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೌರತ್ವ ಕಾಯ್ದೆ ಬಗ್ಗೆ ಅಪಪ್ರಚಾರವಾಗುತ್ತಿದೆ.
   ಹಾಗಾಗಿ ಈ ಬಗ್ಗೆ ಜನಜಾಗೃತಿ ಮೂಡಿಸಬೇಕು, ತುಮಕೂರಿನಲ್ಲಿ ಮಂಗಳವಾರದಂದು ಬಿ.ಜಿ.ಎಸ್ ವೃತ್ತದಿಂದ ಹೊರಡುವ ಜಾಥಾ ಡಿ.ಸಿ. ಕಚೇರಿ ತಲುಪುತ್ತಿದೆ, ಈ ಮೂಲಕ ವಸ್ತುಸ್ಥಿತಿಯನ್ನು ಜನರಿಗೆ ತಿಳಿಸಲಾಗುವುದು ಎಂದರು.ತಾಲ್ಲೂಕಿನಲ್ಲೂ ಒಂದು ವಾರಗಳ ಕಾಲ ಪೌರತ್ವ ಕಾಯ್ದೆ ಬಗೆಗಿನ ಪ್ರಚಾರಾಂದೋಲನ ನಡೆಯಲಿದ್ದು, ತಾಲ್ಲೂಕು ಬಿಜೆಪಿ ಅಧ್ಯಕ್ಷರು ಸೋಮವಾರದಿಂದ ಕಾರ್ಯಕ್ರಮ ಆರಂಭಿಸಲಿದ್ದಾರೆ. ಪ್ರಚಾರಾಂದೋಲನಕ್ಕೆ ಬುಧವಾರ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
   ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಶಂಕರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೆಚ್.ಆರ್.ಶಶಿಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿರಾಜ್‍ಕುಮಾರ್, ಮುಖಂಡರಾದ ಹಳೆಮನೆ ಶಿವನಂಜಪ್ಪ, ತಾ.ಬಿಜೆಪಿ ಕಾರ್ಯದರ್ಶಿ ನಿರಂಜನ್ ಮೂರ್ತಿ, ತಾ.ಪಂ.ಸದಸ್ಯ ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link