ಮತಾಂತರಕ್ಕೆ ಪ್ರಚೋದನೆಗೆ ಮುಂದಾಗಿದ್ದ ಇಬ್ಬರು, ಪೊಲೀಸರಿಗೆ ಸೆರೆ

ಹರಿಹರ :

           ಮನೆ, ಮನೆಗೆ ತೆರಳಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದರೆನ್ನಲಾದ ಇಬ್ಬರನ್ನು ಜನರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

          ನಗರದ ಕುರುಬರ ಬೀದಿಯ ಮನೆಯೊಂದರಲ್ಲಿ ಬೆಳಿಗ್ಗೆ 9.30ಕ್ಕೆ ಮಹಿಳೆಯರಿಗೆ ಕ್ರೈಸ್ತ ಧರ್ಮದ ಕರಪತ್ರ, ಕೊಟ್ಟು, ಮೊಬೈಲ್‍ನಲ್ಲಿ ಏಸುವಿನ ವೀಡಿಯೋ ತೋರಿಸಿ, ಧರ್ಮಾಂತರಕ್ಕೆ ಪ್ರಚೋದನೆ ನೀಡುತ್ತಿದ್ದರೆನ್ನಲಾಗಿದೆ. ಆ ಸಂದರ್ಭದಲ್ಲಿ ಜನರಿಂದ ಮಾಹಿತಿ ತಿಳಿದು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಧಾವಿಸಿ ಇಬ್ಬರನ್ನು ಹಿಡಿದು ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಮಧ್ಯಮ್ಮ ಗುಡಿ ಪಕ್ಕದ ಕಣದ ಸಾಲು, ದೊಡ್ಡಿ ಬೀದಿ, ಕುರುಬರ ಬೀದಿ ಹೀಗೆ ಮೂರು ರಸ್ತೆಗಳಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರ ತಂಡ ಕಳೆದ ಮೂರು ವಾರಗಳಿಂದ ಸಂಚರಿಸಿ ಮನೆ, ಮನೆಗೆ ಭೇಟಿ ಕೊಡುತ್ತಿತ್ತೆನ್ನಲಾಗಿದೆ.

         ಪ್ರತಿ ಭಾನುವಾರ ಬರುತ್ತಿದ್ದ ಈ ತಂಡದ ಸದಸ್ಯರು ಪುರುಷರು ಇಲ್ಲದ ಮನೆಗಳಿಗೆ ತೆರಳಿ ಮಹಿಳೆಯರಿಗೆ ಧರ್ಮಾಂತರಕ್ಕೆ ಪ್ರಚೋದನೆ ನೀಡುತ್ತಿದ್ದರು. ನಿಮ್ಮ ದೇವರು ದೇವರಲ್ಲ, ನಮ್ಮ ಏಸುವಿಗೆ ಪ್ರಾರ್ಥನೆ ಮಾಡಿದರೆ ಮಾತ್ರ ನಿಮಗೆ ಸುಖ, ಶಾಂತಿ, ಐಶ್ವರ್ಯ, ಮೋಕ್ಷ ದೊರೆಯುತ್ತದೆ. ನೀವು ಭಾನುವಾರ ನಡೆಯುವ ಪ್ರಾರ್ಥನೆಯಲ್ಲಿ ಭಾಗವಹಿಸಿ, ಚರ್ಚ್‍ಗೆ ಬನ್ನಿರಿ ಎಂದು ಬ್ರೈನ್ ವಾಶ್ ಮಾಡುತ್ತಿದ್ದರು.

           ಇದನ್ನು ತಿರಸ್ಕರಿಸುವವರಿಗೆ ಓಕೆ ನಾವು ಮುಂದಿನ ಭಾನುವಾರ ಮತ್ತೆ ಬರುತ್ತೇವೆ, ನೀವು ಆಳವಾಗಿ ಯೋಚಿಸಿರಿ, ಇದರಲ್ಲಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಹಿತವಿದೆ ಎಂದು ಹೇಳುತಿದ್ದರೆನ್ನಲಾಗಿದೆ.

           ಜನರಿಂದ ಮಾಹಿತಿ ಪಡೆದು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಬಂದಿರುವುದನ್ನು ಗ್ರಹಿಸಿ ಆರು ಜನರ ತಂಡದ ಪೈಕಿ ನಾಲ್ವರು ತಪ್ಪಿಸಿಕೊಂಡು ಕಣ್ಮರೆಯಾದರು. ಉಳಿದಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಿಗೆ ವಿಚಾರಿಸಿದಾಗ ಓರ್ವ ನಾನು ಚಿಕ್ಕಮಗಳೂರಿನ ವಾಸಿ ಒಂದು ವರ್ಷದಿಮದ ಇಲ್ಲಿದ್ದೇನೆ ಎಂದರೆ, ಇನ್ನೋರ್ವ ನಗರದ ಕಾಳಿದಾಸ ನಗರ ವಾಸಿ ಎಂದಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link