ಬೆಂಗಳೂರು
ಕುಡಿದ ಅಮಲಿನಲ್ಲಿ ಪತ್ನಿಯನ್ನು ನಿಂದಿಸಿದ ಕಾರಣಕ್ಕೆ ಉಂಟಾದ ಜಗಳದಲ್ಲಿ ಆಕ್ರೋಶಗೊಂಡು ಸ್ನೇಹಿತನನ್ನು ಬಿಯರ್ ಬಾಟಲಿಯಲ್ಲಿ ಹೊಡೆದು ಕೊಲೆಗೈದ ಕ್ಯಾಬ್ ಚಾಲಕನೋರ್ವ ದೇವರಜೀವನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ದೇವರಜೀವನಹಳ್ಳಿಯ ದುಬೈ ಲೇಔಟ್ನ ಕ್ಯಾಬ್ ಚಾಲಕ ಅಂಬರೇಶ್ (32)ಎಂದು ಕೊಲೆಯಾದವರವನ್ನು ಗುರುತಿಸಲಾಗಿದೆ . ಕೃತ್ಯವೆಸಗಿದ ಆತನ ಸ್ನೇಹಿತ ಸಂದೀಪ್(28) ದೇವರಜೀವನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು ಆತನನ್ನು ಬಂಧಿಸಲಾಗಿದೆ.ಖಾಸಗಿ ಕಂಪನಿಯ ಕ್ಯಾಬ್ ಚಾಲಕರಾಗಿದ್ದ ಇವರಿಬ್ಬರು ಸ್ನೇಹಿತರಾಗಿದ್ದು, ಶುಕ್ರವಾರ ರಾತ್ರಿ ದುಬೈ ಲೇಔಟ್ನ ಅಂಬರೇಶ್ ಮನೆಯಲ್ಲಿ ಮದ್ಯಪಾನ ಮಾಡಲು ಸೇರಿದ್ದಾರೆ.
ಮದ್ಯ ಸೇವಿಸುತ್ತ ಮತ್ತೇರಿದಾಗ ಸಂದೀಪ್ ಪತ್ನಿಯ ಬಗ್ಗೆ ಅಂಬರೇಶ್ ಕೆಟ್ಟದಾಗಿ ಮಾತನಾಡಿದ್ದಾನೆ. ಈ ವಿಷಯವಾಗಿ ಇಬ್ಬರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಅಂಬರೇಶ್ಗೆ ಬಿಯರ್ ಬಾಟಲಿ ಹಾಗೂ ದೀಪಾಳೆ ಕಂಬದಿಂದ ಹೊಡೆದಿದ್ದಾನೆ.ಸ್ಥಳದಲ್ಲೇ ಅಂಬರೇಶ್ ಮೃತಪಟ್ಟಿದ್ದು, ಹೆದರಿದ ಸಂದೀಪ್, ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ಬಂಧಿಸಿರುವ ದೇವರಜೀವನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








