ಶಿವಮೊಗ್ಗ
ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ ಅಗಬಹುದು ಅಥವಾ ಪುನರ್ ರಚನೆ ಆಗಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಸಂಪುಟದ ನಿರ್ಧಾರ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬಿಟ್ಟ ವಿಚಾರವಾದರೂ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲಾ ಶಾಸಕರಿಗೆ ಸ್ಥಾನ ಖಚಿತ.ಪರಾಜಯಗೊಂಡ ಹಾಗೂ ಪಕ್ಷೇತರ ಆರ್ .ಶಂಕರ್ ಅವರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ತಿರ್ಮಾನ ತಗೆದುಕೊಳ್ಳುತ್ತಾರೆ ಎಂದರು.
ಸುಪ್ರೀಂ ಕೋರ್ಟ್ ಆದೇಶದಂತೆ ಆರ್.ಶಂಕರ್ ಅವರು ಚುನಾವಣೆಯಲ್ಲಿ ಗೆಲ್ಲಬೇಕು ಅಥವಾ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಬೇಕು.ಹಾಗಿದ್ದರೆ ಮಾತ್ರ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದರು.ಗಡಿವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಮಹಾರಾಷ್ಟ್ರದಲ್ಲಿ ಅಲ್ಲಿನ ಸಚಿವರು ದೊಡ್ಡವರಾಗುವ ಭ್ರಮೆಯಲ್ಲಿದ್ದಾರೆ.ನಾವು ನಲ ಜಲ ವಿಚಾರದಲ್ಲಿ ಯಾವ ರಾಜ್ಯದ ತಂಟೆಗೂ ಹೋಗಿಲ್ಲ, ವಾದವನ್ನೂ ಹುಟ್ಟುಹಾಕಿಲ್ಲ.ಕಾನೂನು ಬದ್ಧವಾಗಿದ್ದರೆ ಮಾತ್ರ ನೆಲ- ಜಲವನ್ನು ಬೇರೆ ರಾಜ್ಯಗಳಿಗೆ ಬಿಡಲಾಗುತ್ತದೆ .ಇಲ್ಲವಾದಲ್ಲಿ ಒಂದು ಇಂಚು ಕೂಡ ಜಾಗವನ್ನು ಿಟ್ಟು ಕೊಡುವುದಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ