ಮಿಡಿಗೇಶಿ
ಮಧುಗಿರಿ ತಾ ಮಿಡಿಗೇಶಿ ಹೋಬಳಿಯ ನೇರಳೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳಲ್ಲಿನ ನೀರು ಸರಬರಾಜು ಯೋಜನೆಯಡಿಯಲ್ಲಿ ಕೊಳವೆ ಬಾವಿಗಳಿಗೆ ಅಳವಡಿಸಿರುವ ಕೇಬಲ್ ವೈರ್ ಗಳ ಕಳವು ಪ್ರಕರಣಗಳು ಕಳೆದ ಎರಡು ಮೂರು ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಿರುತ್ತವೆ.
ಕಳುವಾಗುತ್ತಿರುವ ಬಗ್ಗೆ ಐದು ಪ್ರಕರಣಗಳ ಬಗ್ಗೆ ಬಡವನಹಳ್ಳಿ ಪೋಲೀಸ್ ಠಾಣೆಗೆ ಹಾಗೂ ಒಂದು ಕಳವು ಪ್ರಕರಣದ ಬಗ್ಗೆ ಮಿಡಿಗೇಶಿ ಪೋಲೀಸ್ ಠಾಣೆಗೆ ನೇರಳೆಕೆರೆ ಗ್ರಾಮ ಪಂಚಾಯಿತಿ ಪಿ.ಡಿ.ಓ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ರವರು ಲಿಖಿತ ದೂರುಗಳನ್ನು ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ.
ಒಂದೊಂದು ಕೊಳವೆ ಬಾವಿಗಳಿಂದ ತಲಾ ಹದಿನೈದರಿಂದ ಇಪ್ಪತ್ತು ಮೀಟರ್ ಕೇಬಲ್ ವೈರ್ ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರಿಂದ ಗ್ರಾಮ ಪಂಚಾಯಿತಿಗೆ ತಲಾ ಐದು ಸಾವಿರ ರೂಪಾಯಿಗಳಷ್ಠು ನಷ್ಠವಾಗುತ್ತಿದೆ. ಕೇಬಲ್ ಕಳುವು ಮಾಡುವುದರಿಂದ ಕೊಳವೆಬಾವಿಯಿಂದ ಮೋಟಾರ್ ಹೊರತೆಗೆದು ಮತ್ತೆ ಒಳ ಬಿಡಲು ಹಾಗೂ ಮತ್ತೆ ನೂತನ ಕೇಬಲ್ ವೈರನ್ನು ಅಳವಡಿಸ ಬೇಕಾಗುತ್ತದೆ ಹಾಗೂ ಗ್ರಾಮಸ್ಥರಿಗೆ ಕುಡಿಯುವ ನೀರಿನ ಉಂಟಾಗುತ್ತದೆ . ಕೇಬಲ್ ಕಳವು ಪ್ರಕರಣವನ್ನು ಆದಷ್ಟು ಬೇಗ ಮುಗಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೇಬಲ್ ಕಳುವಾಗಿರುವ ಊರುಗಳು:
1) ಕಾಟಗೊಂಡನಹಳ್ಳಿ ಬೋರ್ ವೆಲ್ ಕೆನೆಕ್ಷನ್ ಕೇಬಲ್ 20 ಮೀಟರ್ 2) ವೀರಾಪುರ 3) ನೇರಳೆಕೆರೆ 4) ದಾಸೇನಹಳ್ಳಿ 5) ಗಂಪಲಹಳ್ಳಿ 6) ಗಡ್ಡೇತಿಮ್ಮನಹಳ್ಳಿ