ಕ್ಯಾಲೆಂಡರ್ ಬಿಡುಗಡೆ ಸಮಾರಂಭ

ಹೊಳಲ್ಕೆರೆ:

        ಸಾರ್ವಜನಿಕರಿಗೆ ಮಾರ್ಗದರ್ಶಕರಾಗಿ, ಯುವ ಪೀಳಿಗೆಗೆ ಉತ್ತಮ ಜೀವನ ನಡೆಸಲು ಒಳ್ಳೆಯ ವಿಚಾರಧಾರೆ ತಿಳಿ ಹೇಳಿಕೊಡುವವರೇ ಹಿರಿಯರು. ವೃತ್ತಿ ಬದುಕಿನ ಹೊರಗೂ ಮಾಡಲು ಬೇಕಾದಷ್ಟಿದೆ ಎನ್ನುವ ಗಟ್ಟಿತನ ತೋರಿದರೆ ನಿವೃತ್ತಿಯ ಕೊರಗು ಅವರಿಸದು ಎಂದು ಶಾಸಕ ಎಂ.ಚಂದ್ರಪ್ಪ ಅಭಿಪ್ರಾಯಪಟ್ಟರು.

     ಪಟ್ಟಣದ ಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಸಂಘ ಮತ್ತು ರಿಟೈರ್ಡ್‍ಎಂಪ್ಲಾಯಿಸ್ ಇನ್ಸಟಿಟ್ಯೂಟ್ ಸಂಯುಕ್ತಾಶ್ರಯದಲ್ಲಿ 2019ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

      ನನಗೂ ಈ ಕ್ಷೇತ್ರದಲ್ಲಿ ಹಿರಿಯರ ಮಾರ್ಗದರ್ಶನದಿಂದ ದೊಡ್ಡ ಪ್ರಮಾಣದ ಮತದಾನವನ್ನು ನೀಡಿ ಜಯಶೀಲರನ್ನಾಗಿ ಮಾಡಿದ್ದೀರಾ ನಿಮ್ಮೆಲ್ಲರಿಗೂ ಕೃತಜ್ಞತೆ ನಿಮಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಎಷ್ಟೇ ಇದ್ದರು ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ನಾನು ನಿಮ್ಮ ಈ ಋಉಣ ತೀರುಸವ ಪ್ರಯತ್ನ ಪಡುತ್ತೇನೆ ಎಂದರು.

       ನನ್ನ ಅಧಿಕಾರದ ಅವಧಿಯಲ್ಲಿ ಜಾತಿ ಜನಾಂಗದವರು ಅನ್ನದೇ ಪ್ರೀತಿಯಿಂದ ಪ್ರಾಮಾಣಿಕವಾಗಿ ನನ್ನ ಮೇಲೆ ನೀರೀಕ್ಷೆ ಇಟ್ಟ ಸಾರ್ವಜನಿಕರ ಸೇವೆ ಮಾಡಲು ಆಶಿರ್ವಾದ ಮಾಡಿ. ರೈತರಿಗಾಗಿ ಕೆರೆಗಳಿಗೆ ನೀರು ತುಂಬುವ ಕೆಲಸದ ಜವಾಬ್ದಾರಿ ನನ್ನ ಮೇಲಿದೆ. ಯಾವುದೇ ಧಕ್ಕೆ ಬರದ ಹಾಗೆ ನನ್ನ ಅವಧಿಯಲ್ಲಿ ಆಗುವ ಕೆಲಸಗಳು ನಿಭಾಯಿಸುತ್ತೇನೆ ಎಂದರು.ಕ.ರಾ.ನಿ.ನೌ.ಸಂ.ದ ಅಧ್ಯಕ್ಷ ಎ.ಸಿ.ಗಂಗಾಧರಪ್ಪ ಮಾತನಾಡಿದರು.

        ಸಾಹಿತಿಗಳು ಕರ್ನಾಟಕ ರಾಜ್ಯದ 2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಚಂದ್ರಶೇಖರ್ ತಾಳ್ಯ ಅವರಿಗೆ ಸನ್ಮಾನಿಸಲಾಯಿತು.

        ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎನ್.ಶಿವಮೂರ್ತಿ, ಕ.ರಾ.ನಿ.ನೌ.ಸಂ.ದ ಜಿಲ್ಲಾಧ್ಯಕ್ಷ ಆರ್.ರಂಗಪ್ಪಾರೆಡ್ಡಿ, ರಿಟೈರ್ಡ್ ಎಂಪ್ಲಾಯಿಸ್ ಇನ್ಸಟಿಟ್ಯೂಟ್ ಅಧ್ಯಕ್ಷ ಹೆಚ್.ಶಿವಲಿಂಗಪ್ಪ, ಕ.ರಾ.ನಿ.ನೌ.ಸಂ.ದ ಪ್ರಧಾನ ಕಾರ್ಯದರ್ಶಿ ಬಿ.ಮಲ್ಲೇಶಪ್ಪ, ಮಾಜಿ ಖಜಾಂಚಿ ನಾಗರಾಜ್‍ರಾವ್, ನಿವೃತ್ತ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರುಗಳಾದ ವಸಂತಕುಮಾರ್, ಎಸ್.ರುದ್ರಪ್ಪ, ಈ.ಬಸಪ್ಪ, ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link