ಈಚನೂರು ಕಾವಲ್‍ :ಚಿರತೆ ದಾಳಿಗೆ ಕರು ಬಲಿ

ತಿಪಟೂರು
      ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಒಂದು ಕರು ಚಿರತೆಗೆ ಬಲಿಯಾಗಿ ಜನತೆಯಲ್ಲಿ ಆತಂಕವನ್ನುಂಟುಮಾಡಿದೆ.
ತಾಲ್ಲೂಕಿನ ಈಚನೂರು ಕಾವಲಿನಲ್ಲಿ ಭಾನುವಾರ ಬೆಳಗ್ಗೆ ಹೇಮಂತ್ ಎನ್ನುವವರ ಕರು ಚಿರತೆಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಆತಂಕವನ್ನು ಉಂಟು ಮಾಡುವುದರ ಜೊತೆಗೆ ಜಾನುವಾರುಗಳನ್ನು ಮೇಯಿಸಲು ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
     ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಸ್ಥಳ ಮಹಜರು ಮಾಡಿದ್ದಾರೆ. ಆದರೂ ಸಹ ಜನರಲ್ಲಿ ಚಿರತೆಯನ್ನು ಹಿಡಿಯುವವರೆಗೆ ಭಯ ತಪ್ಪಿದ್ದಲ್ಲ. ಸ್ಥಳೀಯ ಭರತ್ ಹೇಳುವಂತೆ ಚಿರತೆಯು ಕರುವನ್ನು ತಿಂದು ಸುಸ್ತಾಗಿ ರಸ್ತೆಯಲ್ಲಿ ಮಲಗಲಿತ್ತು. ಅದನ್ನು ಓಡಿಸಲು ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಬಂದ ವಾಹನವೊಂದು ಜೋರಾಗಿ ಶಬ್ಧ ಮಾಡಿದ್ದರಿಂದ ಸ್ವಲ್ಪ ಸಮಯದ ನಂತರ ಅಲ್ಲಿಂದ ಕದಲಿತು. 
  
     ಚಿರತೆಯು ಕರುವನ್ನು ತಿಂದಿರುವುದರಿಂದ ನಾವು ಮೇಕೆ, ಕುರಿಗಳನ್ನು ಎಷ್ಟು ದಿನವೆಂದು ಕೂಡಿ ಮೇವು ಹಾಕಲಾಗುತ್ತದೆ. ಇದರಿಂದ ನಮ್ಮ ಹೈನುಗಾರಿಕೆಯ ಮೇಲೆ ಬಹಳ ಪಟ್ಟು ಬೀಳುತ್ತಿದ್ದು, ನಮ್ಮ ಹೊಟ್ಟೆಯ ಮೇಲೆ ಬರೆ ಬೀಳುವ ಮೊದಲೆ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿದು ಅನುಕೂಲ ಮಾಡಿಕೊಟ್ಟು ನಮ್ಮ ಹಿತವನ್ನು ಕಾಯಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

Recent Articles

spot_img

Related Stories

Share via
Copy link