ಪಾವಗಡ;-
ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಖಾಯಿಲೆಯನ್ನು ಪತ್ತೆ ಹಚ್ಚಿದರೆ ಖಂಡಿತವಾಗಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನಡೆಸಿ ಪೂರ್ಣವಾಗಿ ಗುಣಮುಖರನ್ನಾಗಿ ಮಾಡಬಹುದು ಎಂದು ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ.ಸಂಜೀವ್ ಕುಲಕರ್ಣಿ ತಿಳಿಸಿದರು.
ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಪಾವಗಡ ತಾಲ್ಲೂಕಿನ ಗ್ರಾಮಿಣ ರೋಗಿಗಳಿಗಿ ಅನುಕೂಲವಾಗಲು ಪ್ರತಿ ತಿಂಗಳು ಉಚಿತ ಶಿಬಿರವನ್ನು ನಡೆಸಿ, ಅವಶ್ಯ ಇರುವ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮೂಲಕ ಗುಣ ಪಡಿಸಲಾಗುವುದು ಎಂದು ತಿಸಿದರು.
ಇಂಗ್ಲೇಂಡ್ ನ ಡಾ.ಆರ್.ಎಸ್.ಸೂರ್ಯನಾರಾಯಣ ಶೆಟ್ಟಿ, ಮಾತನಾಡಿ, ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯವುದು ಇಂದು ಅತ್ಯಂತ ದುಬಾರಿಯಾಗಿದ್ದು, ಇಂತಹ ಸೂಕ್ಷ್ಮತರವಾದ ಆರೋಗ್ಯ ತಪಾಸಣಾ ಶಿಬಿರವನ್ನು ಪಾವಗಡದಲ್ಲಿಯೇ ದೊರಕುವಂತೆ ಮಾಡಿರುವ ಸ್ವಾಮಿವೇವೇಕಾನಂದ ಆರೋಗ್ಯ ಸಂಸ್ಥೆಯ ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಸ್ವಾಮಿ ಜಪಾನಂದಜೀ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ತಮ್ಮ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ, ಕೇವಲ ಒಮ್ಮೆ ತಪಾಸಣೆ ನಡೆಸಿ ಸುಮ್ಮನಿರದೆ ಪ್ರತಿ ತಿಂಗಳೂ ಇಂತಹ ಶಿಬಿರವನ್ನು ಆಯೋಜಿಸಿ ಗ್ರಾಮಾಂತರ ಪ್ರದೇಶದ ಬಡ ಜನರಿಗೆ ಅನುಕೂಲ ಮಾಡಲಾಗುವುದು, ಪಾವಗಡ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಆಂಧ್ರಪ್ರದೇಶದ ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಸ್ವಾಮಿವೀವೇಕಾನಂದ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಡಾ.ಜಿ.ವೆಂಕಟರಾಮಯ್ಯ, ಡಾ. ಚಂದ್ರಕಲಾ ಮಾತನಾಡಿದರು.
ಸಂಸ್ಥೆಯ, ಆಡಳಾತಾಧಿಕಾರಿಗಳಾದ ಜಯಶ್ರಿ, ಶೋಬಾ, ಡಾ.ಶ್ರುತಿ, ಡಾ.ಲೋಹಿತ, ಡಾ.ಮಂಜುನಾಥ, ಡಾ.ರಾಘವೇಂದ್ರ ಬಾಬು, ,ಡಾ. ಶ್ರಿಕಾಂತ್, ಆಸ್ಪತ್ರೆಯ ಸಿಬ್ಬಂದಿ ರಮೇಶ್, ದೇವರಾಜ್, ಪ್ರಕಾಶ್, ತಿಪ್ಪೇಸ್ವಾಮಿ, ಹಾಜರಿದ್ದರು.ಈ ಶಿಬಿರ ಸುಮಾರು 80 ಕ್ಕೂ ಮಿಗಿಲಾದ ಕ್ಯಾನ್ಸರ್ ಪೀಡಿತ ಹಾಗೂ ಕ್ಯಾನ್ಸರ್‍ನ ಹಿನ್ನೆಲೆ ಉಳ್ಳ ರೋಗಿಗಳು ತಪಾಸಣೆಗೊಳಗಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








