ಕಬ್ಬಿನ ಹಾಲುಕುಡಿದ ಲೋಟ ಮರುಬಳಕೆ ಮಾಡಿ ಸಿಕ್ಕಿಬಿದ್ದ ವ್ಯಾಪಾರಿ

ತಿಪಟೂರು :
     ಕಬ್ಬಿನ ಹಾಲು ಕುಡಿದು ಬಿಸಾಡಿದ ಲೋಟಗಳನ್ನು ಮರುಬಳಕೆ ಮಾಡುತ್ತಿದ್ದಾರೆಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರು ಕಬ್ಬಿನ ಹಾಲನ್ನು ಕುಡಿಯುವುದರಿಲಿ ನೋಡಿದರು ಓಡವುಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
     ಮೊದಲೇ ಬೇಸಿಗೆ, ಅದರಲ್ಲೂ ಕೊರೊನಾ ಮಹಾಮಾರಿ ರುದ್ರತಾಂಡವಾಡುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ಮಾದಿಹಳ್ಳಿ ರೇಲ್ವೆ ಮೇಲು ಸೇತುವೆ ಹತ್ತಿರ ನಗರದ ತ್ರಿಮೂರ್ತಿ ಥಿಯೇಟರ್ ಹತ್ತಿರ ಇರುವ ಕಲ್ಪತರು ಜ್ಯೂಸ್ ಸೆಂಟರ್ ಯುವಕ ಒಮ್ಮೆ ಬಳಸಿದ ಲೋಟಗಳನ್ನು ಪುನಃ ಆಯ್ದುಕೊಂಡು ಬಂದು ಮತ್ತೆ ಅದೇ ಲೋಟದಲ್ಲಿ ಕಬ್ಬಿನ ಹಾಲನ್ನು ಹಾಕಿಕೊಡುತ್ತಿದ್ದಾನೆಂದು ವಿಡಿಯೋದಲ್ಲಿ ಇದ್ದು ನಾನು ಮಾಡಿದ್ದು ತಪ್ಪು ಇದಕ್ಕಾಗಿ ಕ್ಷಮೇ ಕೇಳುತ್ತೇನೆ ಎಂದು ಯುವಕನು ಒಪ್ಪಿಕೊಂಡು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತಾಲ್ಲೂಕಿನ ಎಲ್ಲಾ ವಾಟ್ಸ್ ಆಪ್‍ಗ್ರೂಪ್‍ಗಳಲ್ಲು ಹರಿದಾಡುತ್ತಿದೆ.
ಸ್ಥಳೀಯ ವಾಸಿಗಳ ಆಕ್ರೋಶ :
     ಇದೆಲ್ಲದರ ಮದ್ಯೆಯೇ ಕಬ್ಬಿನ ಹಾಲಿನ ವ್ಯಾಪಾರಿಯು ತನ್ನ ಗ್ರಾಮವು ಇಲ್ಲೇ ಪಕ್ಕದಲ್ಲಿನ ಬೊಮ್ಮಲಾಪುರದವನೆಂದು ಹೇಳಿದ್ದಕ್ಕೆ ಬೊಮ್ಮಲಾಪುರ ನಿವಾಸಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದೂ ಎಲ್ಲಿಂದಲೋ ಬಂದವರು ನಮ್ಮ ಊರಿನಲ್ಲಿ ಕಬ್ಬಿನ ಹಾಲು ಮಾರುವ ಗಾಡಿಗಳಿರುವುದರಿಂದ ಬೊಮ್ಮಲಾಪುರ ಎಂದು ಹೇಳಿ ನಮ್ಮ ಊರಿಗೆ ಕೆಟ್ಟಹೆಸರು ತರಲು ಪ್ರಯತ್ನಿಸುತ್ತಿದ್ದಾನೆಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯ :
     ನಗರ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಅಂಗಡಿಗಳನ್ನು ಹಾಕಿಕೊಂಡು ಕಾಫೀ/ ಟೀ ಮಾರುವವರಿಗೆ ದಂಡಹಾಕುತ್ತಿದ್ದಾರೆ. ಇನ್ನು ಲಾಕ್‍ಡೌನ್ ಜಾರಿಯಲ್ಲಿದ್ದು ಯಾವುದೇ ಕಾರಣಕ್ಕೂ ತಿಂಡಿ / ಪಾನೀಯಗಳನ್ನು ಸ್ಥಳದಲ್ಲೇ ಸೇವಿಸಲು ಅವಕಾಶವಿಲ್ಲ ಕೇವಲ ಪಾರ್ಸೆಲ್‍ಮಾತ್ರ ಎಂಬ ಆದೇಶಿಸಿದ್ದರು ಈರೀತಿ ಸ್ಥಳದಲ್ಲೇ ಕುಡಿಯುವ ವ್ಯವಸ್ಥೆಯನ್ನು ಮಾಡಿ ಮತ್ತು ಸರ್ಕಾರಿ ಆದೇಶವನ್ನು ಹೆಚ್ಚಾಗಿ ಅರ್ಥಮಾಡಿಕೊಂಡಿರುವ ಜ್ಯೂಸ್ ಕುಡಿದು ಬಿಸಾಡಿದ ಲೋಟಗಳನ್ನೇ ಮರುಬಳಕೆ ಮಾಡುತ್ತಿರುವ ಅತೀ ಬುದ್ದಿವಂತನಂತೆ ಕಾಣುತ್ತಿದ್ದು ಇದರ ಬಗ್ಗೆ ತಾಲ್ಲೂಕು ಆಡಳಿತವಾಗಲಿ ಅಥವಾ ಸ್ಥಳೀಯ ಗ್ರಾಮಪಂಚಾಯಿತಿಯಾದರು ಕ್ರಮಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.
ನಗರಕ್ಕೆ ಭೇಟೀ ನೀಡಿದ ಆಹಾರ ಪರೀಕ್ಷಕರು :
 
      ಇನ್ನು ನಗರದಲ್ಲಿ ಕಳಪೆದರ್ಜೆ ಆಹಾರವನ್ನು ನೀಡುವ ಬಗ್ಗೆ, ನಿಗದಿತ ದರಕಿಂತ ಹೆಚ್ಚಿನದರ, ಕೆಲವು ಬೇಕರಿಗಳಲ್ಲಿ ನಿಷೇದಿತ ವರ್ಣ, ಮತ್ತು ಸ್ವಚ್ಚತೆ ಇರುವುದಿಲ್ಲ ಎಂಬ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು ಆಹಾರ ಪರೀಕ್ಷಕರು ಮಾತ್ರ ಬೇಟಿ ನೀಡದಿರುವುದು ವಿಪರ್ಯಾಸವಾಗಿದೆ.
 
ಬಾರ್‍ಗಳಲ್ಲಿ ದುಪ್ಪಟ್ಟು ದರ ವಸೂಲಿ :
      ಮದ್ಯವ್ಯಸನಿಗಳು ಹೆಚ್ಚು ಪ್ರಾಮಾಣಿಕರು ಎಂದು ಕೇಳಿದ್ದೇವೆ. ಆದರೆ ಇಂತಹ ಕುಡುಕರಿಗೇ ಕೆಲವು ಬಾರ್‍ಗಳಲ್ಲಿ 135 ರೂ ಇರುವ ಬಿಯರ್ ಬಾಟಲ್‍ಗೆ 180 ರೂ ಕೊಡಿ ಎಂದು ಕೇಳಿದಾಗ ಏಕೆ ಎಂದು ಕೇಳಿದರೆ ದರ ಹೆಚ್ಚಾಗಿದೆ ಇದು ಹಳೆಯ ಸ್ಟಾಕ್ ನಮಗೆ ಬಂದಿರುವುದು ಹೀಗೆ ಎಂದು ತಿಳಿಸಿ ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಬಿಡಿ ಎಂದು ದಬ್ಬಾಳಿಕೆ ಮಾಡುತ್ತಾರೆಂದು ಕೆಲವು ಮದ್ಯಪ್ರಿಯ ಸ್ನೇಹಿತರು ತಿಳಿಸುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap