ಕಾರವಾರ:

ದೇಶದ ಮೊದಲ ಕೆನೋಪಿ ವಾಕ್ ಇದೇ ನವೆಂಬರ್ ವೇಳೆಗೆ ಪ್ರವಾಸಿಗರಿಗೆ ಮುಕ್ತವಾಗಲಿದೆ.ಈ ಫೆಬ್ರವರಿಯಲ್ಲಿ ಉದ್ಘಟನೆಯಾಗಿದ್ದ ಕೆನೋಪಿ ವಾಕ್ ಸೌಲಭ್ಯವನ್ನು ಮಳೆಗಾಲದ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು.
ಕರ್ನಾಟಕ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ 30 ಮೀಟರ್ ಎತ್ತರದ 240 ಮೀಟರ್ ಕೆನೋಪಿ ವಾಕ್ (ಮೇಲಾವರಣ ರಸ್ತೆ)ಯನ್ನು ನಿರ್ಮಾಣ ಮಾಡಿದೆ.84 ಲಕ್ಷ ರು. ವೆಚ್ಚದಲ್ಲಿ ತಯಾರಾಗಿರುವ ಈ ಕೆನೋಪಿ ವಾಕ್ ಉತ್ತರ ಕನ್ನಡ ಜಿಲ್ಲೆ ಕ್ಯಾಸೆಲ್ ರಾಕ್ ವನ್ಯಜೀವಿ ಸಂರಕ್ಷಿತ ಪ್ರದೇಸದಲ್ಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
