ಸಮರ್ಥ ಕಬಡ್ಡಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ

ಚಿತ್ರದುರ್ಗ:

     ಕರ್ನಾಟಕ ರಾಜ್ಯದಲ್ಲಿ ಕಬಡ್ಡಿಪಟುಗಳೇ ಇಲ್ಲವೇನೋ ಎನ್ನುವ ತಪ್ಪು ಕಲ್ಪನೆಯನ್ನು ಜನರ ಮನಸ್ಸಿನಿಂದ ಹೋಗಲಾಡಿಸಿ ಕಬಡ್ಡಿಯನ್ನು ಉಳಿಸುವುದಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅರ್ಜುನ ಪ್ರಶಸ್ತಿ ಪುರಸ್ಕøತ ಕಬಡ್ಡಿಪಟು ಹೊನ್ನಪ್ಪಗೌಡ ಹೇಳಿದರು.
ವಂದೇಮಾತರಂ ಜಾಗೃತಿ ವೇದಿಕೆಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಸರ್ವಧರ್ಮ ಕಬಡ್ಡಿ ಕಪ್ ಪುರುಷರ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

      ರಾಜ್ಯದಲ್ಲಿ ಕಬಡ್ಡಿಪಟುಗಳು ನಶಿಸುತ್ತಿದ್ದಾರೆಂಬ ಕೊರಗನ್ನು ನೀಗುಸುವುದಾಗಿ ಭರವಸೆ ನೀಡಿದ ಹೊನ್ನಪ್ಪಗೌಡ, ಕರ್ನಾಟಕದಲ್ಲಿರುವಂತ ಕಬಡ್ಡಿ ಕ್ರೀಡಾಪಟುಗಳು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಆದರೆ ಅವಕಾಶದಿಂದ ವಂಚಿತರಾಗಿದ್ದಾರೆ. ಚಿತ್ರದುರ್ಗದಲ್ಲಿ ವಂದೆಮಾತರಂ ಜಾಗೃತಿ ವೇದಿಕೆ ಮೊದಲ ಬಾರಿಗೆ ಮ್ಯಾಟ್ ಮೇಲೆ ರಾಜ್ಯ ಮಟ್ಟದ ಕಬ್ಬಡಿ ಪಂದ್ಯ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

       ವಂದೇಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ ಕನ್ನಡ ರಾಜ್ಯೋತ್ಸವವನ್ನು ನಮ್ಮ ವೇದಿಕೆ ಬರೀ ನವೆಂಬರ್ ತಿಂಗಳಿಗೆ ಮಾತ್ರ ಮೀಸಲಾಗಿಟ್ಟಿಲ್ಲ. ಡಿಸೆಂಬರ್‍ನಲ್ಲಿಯೂ ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಅದರಂತೆ ಈ ಬಾರಿ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ನಡೆಸುತ್ತಿದ್ದೇವೆ. ಜಾತಿ ಬೇಧ ನಮ್ಮಲ್ಲಿಲ್ಲ. ಹಿರಿಯರು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದರು. ಈಗ ನಾವುಗಳು ನ್ಯಾಯಕ್ಕಾಗಿ ಹೋರಾಡಬೇಕಾದಂತ ಪರಿಸ್ಥಿತಿ ಎದುರಾಗಿದೆ. ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರವನ್ನು ಒತ್ತಾಯಿಸಿದರು.
ಹಿರಿಯ ಕಬಡ್ಡಿಪಟು ಅಬ್ದುಲ್‍ಸಲಾಂ, ನಾಗೇಂದ್ರಪ್ಪ, ಗ್ರಾ.ಪಂ.ಸದಸ್ಯ ಬಸವರಾಜ್, ಮಿಸ್ ಕರ್ನಾಟಕ ಕು.ಅಶ್ವಿನಿ ವೇದಿಕೆಯಲ್ಲಿದ್ದರು.
ಹಿರಿಯ ಕಬಡ್ಡಿಪಟು ಮುರುಗೇಶ್ ಎಲ್ಲರನ್ನು ಸ್ವಾಗತಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link