ಬೆಂಗಳೂರು
ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ ಸಿಗ್ನಲ್ ಜಂಪ್ ಮಾಡಿ ಡಿಕ್ಕಿ ಹೊಡೆದು ಕಾರಿನಲ್ಲಿ ಹೋಗುತ್ತಿದ್ದ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡಿರುವ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಡಾ.ರಾಜ್ಕುಮಾರ್ ರಸ್ತೆಯ ನವರಂಗ್ ಸಿಗ್ನಲ್ ಬಳಿ ಶನಿವಾರ ಮುಂಜಾನೆ ನಡೆದಿದೆ.
ಲಗ್ಗೆರೆಯ ರವಿಕಿರಣ್(19)ಎಂದು ಮೃತಪಟ್ಟವರನ್ನು ಗುರುತಿಸಲಾಗಿದ್ದು, ಗಾಯಗೊಂಡಿರುವ ಕಾರು ಚಾಲಕ ಪುನೀತ್(28) ಗಂಗಾಧರ್ ಮತ್ತು ಅವರ ಪತ್ನಿ ವರಲಕ್ಷ್ಮಿ(24) ಹಾಗೂ ಪುತ್ರ ಸುಮಂತ್(3)ಸೇರಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜ್ವರದಿಂದ ಬಳುತ್ತಿದ್ದ ಸುಮಂತ್ನನ್ನು ಆಸ್ಪತ್ರೆಗೆ ಕರೆದುಕೊಂಡು ಗಂಗಾಧರ್, ವರಲಕ್ಷ್ಮಿ ಅವರು ಪುನೀತ್ ಚಲಾಯಿಸುತ್ತಿದ್ದ ಇಂಡಿಕಾ ಕಾರಿನಲ್ಲಿ ಪಕ್ಕದ ಮನೆಯ ಮೃತ ರವಿಕಿರಣ್ ಜೊತೆ ಮುಂಜಾನೆ 3ರ ಸುಮಾರಿನಲ್ಲಿ ಲಗ್ಗೆರೆಯಿಂದ ಹೋಗುತ್ತಿದ್ದರು.
ಮಾರ್ಗ ಮಧ್ಯೆ ನವರಂಗ್ ಸಿಗ್ನಲ್ ಬಳಿ(24 ಗಂಟೆಗಳ ಕಾಲ ಈ ಸಿಗ್ನಲ್ ಕಾರ್ಯನಿರ್ವಹಿಸುತ್ತದೆ) ಮೋದಿ ಆಸ್ಪತ್ರೆ ಕಡೆಯಿಂದ ರಸ್ತೆಯ ಇಳಿಜಾರಿನಲ್ಲಿ ಬರುವಾಗ ಮೆಜೆಸ್ಟಿಕ್ ಕಡೆಗೆ ವೇಗವಾಗಿ ಹೋಗುತ್ತಿದ್ದ ಕೆಎಸ್ಆರ್ಟಿಸಿಯ ವಾಯುವ್ಯ ವಿಭಾಗದ ಬ್ಯಾಡಗಿಯಿಂದ ಬಂದ ಬಸ್ ಸಿಗ್ನಲ್ ಜಂಪ್ ಮಾಡಿ ಕಾರಿಗೆ ಡಿಕ್ಕಿ ಹೊಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








