ಮಧುಗಿರಿ:
ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಿಡಿಗೇಶಿ ಹೋಬಳಿ ಕ್ಯಾತನಾಗಹಳ್ಳಿ ಸಮೀಪ ಶುಕ್ರವಾರ ರಾತ್ರಿ ನಡೆದಿದೆ.ಪಾವಗಡ ತಾಲ್ಲೂಕಿನ ನಲಿಗಾನಹಳ್ಳಿಯ ದುಗ್ಗಪ್ಪ (22), ಬ್ಯಾಡನೂರು ಗ್ರಾಮದ ನರಸಮ್ಮ (48) ಹಾಗೂ ಮಡಕಶಿರಾ ತಾಲ್ಲೂಕಿನ ಎನ್.ಆರ್. ರೊಪ್ಪ ಗ್ರಾಮದ ಚಾಲಕ ನರಸಿಂಹಮೂರ್ತಿ (32) ಮೃತಪಟ್ಟವರು. ನಲಿಗಾನಹಳ್ಳಿಯ ಮಾರಣ್ಣ (55), ಅಲುವೇಲಮ್ಮ (45) ಹಾಗೂ ಗೋವಿಂದಪ್ಪ (50) ಗಾಯಗೊಂಡವರು.ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಿಕೊಂಡು ಸ್ವ ಗ್ರಾಮಕ್ಕೆ ತೆರಳುತ್ತಿದ್ದಾಗ, ಅಪಘಾತ ಸಂಭವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ