ಭೂ ಕಬಳಿಕೆಗೆ ಯತ್ನ ಐವರು ಪೊಲೀಸರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು

         ಭೂ ಕಬಳಿಕೆಗೆ ಯತ್ನದ ಆರೋಪದ ಮೇಲೆ ಕೆ.ಆರ್.ಪುರಂ ಪೊಲೀಸ್ ಠಾಣೆಯ ಇಬ್ಬರು ಸಬ್‍ಇನ್ಸ್‍ಪೆಕ್ಟರ್‍ಗಳು ಸೇರಿ ಐವರು ಪೊಲೀಸರ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

        ಕೆ.ಆರ್.ಪುರಂ ಪೊಲೀಸ್ ಠಾಣೆ ಇಬ್ಬರು ಸಬ್ ಇನ್ಸ್‍ಪೆಕ್ಟರ್‍ಗಳು ಎಎಸ್‍ಐ, ಮುಖ್ಯ ಪೇದೆ ಮತ್ತು ಮಹಿಳಾ ಮುಖ್ಯ ಪೇದೆ ವಿರುದ್ಧ ನ್ಯಾಯಾಲಯದ ಸೂಚನೆ ಮೇರೆಗೆ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

        ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರೌಡಿಗಳ ಜೊತೆ ಕೆ.ಆರ್ ಪುರ ಪೊಲೀಸರು ಭೂ ಕಬಳಿಕೆ ಮಾಡಲು ಯತ್ನಿಸಿದ್ದಾರೆ ಎಂದು ಐವರ ವಿರುದ್ಧ ಆರೋಪಿಸಲಾಗಿತ್ತು.ಪ್ರಭಾವತಿ ಎಂಬವರ ಮನೆಗೆ ರೌಡಿಗಳು ಅತಿಕ್ರಮಣ ಪ್ರವೇಶ ಮಾಡಿ ಮನೆ ಬಾಗಿಲು, ಗೃಹಪಯೋಗಿ ವಸ್ತುಗಳು ಧ್ವಂಸ ಮಾಡಲಾಗಿತ್ತು.ಈ ವೇಳೆ ರೌಡಿಗಳ ವಿರುದ್ಧ ದೂರು ನೀಡಲು ಪ್ರಭಾವತಿ ಕೆ.ಆರ್ ಪುರ ಪೊಲೀಸ್ ಠಾಣೆಗೆ ತೆರಳಿದ್ದರು.
ಆದರೆ ಪೊಲೀಸರು ದೂರು ಪಡೆಯಲು ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದು ಹಣ ನೀಡಲು ನಿರಾಕರಿಸಿದಾಗ ಪೊಲೀಸರು ಕೂಡ ದೂರು ಪಡೆಯಲು ನಿರಾಕರಿಸಿದ್ದರು. ಅಲ್ಲದೇ ರೌಡಿಗಳಿಗೆ ಸಾಥ್ ನೀಡಿ ದೂರುದಾರರಿಗೆ ಪೊಲೀಸರು ಜೀವಬೆದರಿಕೆ ಹಾಕಿದ್ದರು. ಪೊಲೀಸರು ದೂರು ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ದೂರುದಾರೆ ಪ್ರಭಾವತಿ ನ್ಯಾಯಲಯದ ಮೊರೆ ಹೋಗಿದ್ದರು.

         ಆಸ್ತಿ ವಿಚಾರದಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡಬಾರದು ಎಂದು ನ್ಯಾಯಾಲಯದ ಆದೇಶವಿದ್ದರೂ ಪೊಲೀಸರು ಆ ಆದೇಶವನ್ನು ನಿರ್ಲಕ್ಷ್ಯ ಮಾಡಿದ್ದರು. ಹೀಗಾಗಿ ಇದೀಗ ಪ್ರಕರಣ ದಾಖಲಿಸಿ ಐವರ ವಿರುದ್ಧ ತನಿಖೆ ನಡೆಸುವಂತೆ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹ್ಮದ್ ಗೆ 10 ಎಸಿಎಂಎಂ ನ್ಯಾಯಾಲಯ ಆದೇಶ ನೀಡಿರುವ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್‍ಸಿಂಗ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap