ಹುಲಿರಾಯನ ವಿರುದ್ಧ ಕೇಸ್ ದಾಖಲು .!

ಬೆಂಗಳೂರು

      ಸ್ಯಾಂಡಲ್‌ವುಡ್ ನಟ ಹುಲಿರಾಯ ಬಾಲುನಾಗೇಂದ್ರ ಪತ್ನಿ ಹಾಗೂ ಮಗುವನ್ನು ಥಳಿಸಿದ ಪ್ರಕರಣ ಬೆಳಕಿಗೆ ಬಂದಿದ್ದು ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವು ಬಸವನಗುಡಿ ಮಹಿಳಾ ಠಾಣೆಯಲ್ಲಿ ದಾಖಲಾಗಿದೆ.

     ಹುಲಿರಾಯ, ಕಪಟನಾಟಕ ಸೂತ್ರಧಾರಿ, ಕಡ್ಡಿಪುಡಿ ಚಿತ್ರಗಳಲ್ಲಿ ನಟಿಸಿರುವ ನಟ ಬಾಲುನಾಗೇಂದ್ರ ಪತ್ನಿಗೆ ಥಳಿಸಿದ್ದಾರೆ.ಅವರ ಪತ್ನಿ ತನ್ನ ತವರು ಮನೆಗೆ ಪ್ರತಿ ತಿಂಗಳೂ ೮೦೦೦ ರೂಪಾಯಿ ಕಳಿಸುತ್ತಿದ್ದರು. ಮದುವೆಗೆ ಮೊದಲೇ ಅವರು ಇದನ್ನು ಬಾಲುನಾಗೇಂದ್ರ ಅವರಿಗೆ ತಿಳಿಸಿದ್ದರು. ಆದರೂ ಕೂಡ ತವರುಮನೆಗೆ ಹಣ ಕೊಡುವುದನ್ನು ವಿರೋಧಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗೇ ವಾಪಸ್ ಕೊಡುವುದಾಗಿ ಹೇಳಿ ಹೆಂಡತಿಯಿಂದ ೧,೫೦,೦೦೦ ರೂಪಾಯಿ ತೆಗೆದುಕೊಂಡಿದ್ದ. ಅದನ್ನಿನ್ನೂ ವಾಪಸ್ ಕೊಟ್ಟಿಲ್ಲ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

     ನಂತರ ತಾನು ಕೆಲಸಕ್ಕೆ ಹೋಗುವುದಿಲ್ಲ, ಓದುತ್ತೇನೆ ಎಂದು ಬಾಲುನಾಗೇಂದ್ರ ಅವರ ಪತ್ನಿ ಹೇಳಿದ್ದರು. ಆದರೆ ಅದಕ್ಕೆ ಒಪ್ಪದ ನಟ, ಇಲ್ಲ ನೀನು ಕೆಲಸಕ್ಕೆ ಹೋಗಬೇಕು ಎಂದು ಬಲವಂತವಾಗಿ ಕಳಿಸಿದ್ದ. ಅಲ್ಲದೆ ಆಕೆಯನ್ನು ಕೆಲಸದ ಸ್ಥಳದಿಂದ ಮನೆಗೆ ಬೈಕ್‌ನಲ್ಲಿ ಕರೆದುಕೊಂಡು ಬರುವ ವೇಳೆ ಕೂಡ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.

     ಮಗುವಿಗೂ ಕೂಡ ಹೊಡೆಯುತ್ತಿದ್ದ. ಮನೆಯಲ್ಲಿ ಏನೇ ಚಿಕ್ಕಪುಟ್ಟ ಸಮಸ್ಯೆಯಾದರೂ ಹೆಂಡತಿ ಮೇಲೆ ಕೈಮಾಡುತ್ತಿದ್ದ. ಇತ್ತೀಚೆಗೆ ಪತ್ನಿ-ಮಗುವನ್ನು ಮನೆಯಿಂದ ಹೊರಹಾಕಿದ್ದ. ಪತ್ನಿ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ನಟನನ್ನು ಈಗಾಗಲೇ ಪೊಲೀಸರು ಮೂರ್ನಾಲ್ಕುಬಾರಿ ವಿಚಾರಣೆ ಮಾಡಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link