ಬೆಂಗಳೂರು:

2ನೇ ಹಂತದ ಮತದಾನದ ವೇಳೆ ಮತದಾನ ಪ್ರಮಾಣವನ್ನು ಹೆಚ್ಚು ಮಾಡಲೆಂದು ಚುನಾವಣಾ ಆಯೋಗ ನಾನಾ ವಿಧವಾಗಿ ಪ್ರಯತ್ನ ನಡೆಸುತ್ತಿದೆ ಇದಕ್ಕೆ ಕೈ ಜೋಡಿಸಿರುವ ಬೆಂಗಳೂರಿನ ಹೋಟೆಲ್ ಒಂದು ವಿನೂತನ ರೀತಿಯಲ್ಲಿ ಪ್ರಮೋಶನ್ ಮಾಡುತ್ತಿದೆ.
ಚುನಾವಣಾ ಆಯೋಗಗಳು ಮತದಾನದ ಪ್ರಮಾಣ ಹೆಚ್ಚಳ ಮಾಡಲು ವಿವಿಧ ಬಗೆಯ ಅಭಿಯಾನ ಹಮ್ಮಿಕೊಂಡಿದ್ದು, ಈ ಅಭಿಯಾನಕ್ಕೆ ನಗರದ ಕೆಲ ಸಂಘಸಂಸ್ಥೆಗಳು ಹಾಗೂ ಕೆಲ ಹೊಟೆಲ್ ಗಳೂ ಕೂಡ ಸಾಥ್ ನೀಡಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೊಟೆಲ್ ಮತದಾನ ಮಾಡಿದ ಮತದಾರರಿಗೆ ಉಚಿತ ತಿಂಡಿ ಮತ್ತು ಪಾನಕ ನೀಡುವುದಾಗಿ ಘೋಷಣೆ ಮಾಡಿದೆ.
ಹೊಟೆಲ್ ಮುಂಭಾಗದಲ್ಲಿ ದೊಡ್ಡ ಫಲಕದಲ್ಲಿ ಬರೆಯಲಾಗಿದ್ದು, ಇಂದು ಮತದಾನ ಮಾಡಿ ಹೊಟೆಲ್ ಗೆ ಬರುವ ಗ್ರಾಹಕರು ಕೈಗೆ ಹಾಕಿರುವ ಶಾಹಿ ತೋರಿಸಿ ಬೆಣ್ಣೆ ಖಾಲಿ ದೋಸೆ, ಸಿಹಿತಿಂಡಿ ಮತ್ತು ಪಾನಕವನ್ನು ಉಚಿತವಾಗಿ ದೊರೆಯುತ್ತದೆ ಎಂದು ಬರೆದಿದ್ದಾರೆ. ಅಂತೆಯೇ ಇದೊಂದು ರಾಜಕೀಯೇತರ ಕಾರ್ಯಕ್ರಮವಾಗಿದ್ದು ಕೇವಲ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮ ಎಂದು ಹೊಟೆಲ್ ಆಡಳಿತ ಮಂಡಳಿ ಸ್ಪಷ್ಟನೆ ಕೂಡ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
