ಸಿಬಿಐ ತನಿಖೆಗೆ ಒಳಪಡಿಸಲು ಸರ್ಕಾರಕ್ಕೆ ಆಗ್ರಹ

ಚಿತ್ರದುರ್ಗ

       ರಾಯಚೂರು ನಗರದ ಇಂಜಿನಿಯರ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ಮಧು ಪತ್ತಾರ್ ರವರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನುಸಿ.ಬಿ.ಐ. ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಲೆಜೆಂಡ್ ಮುತ್ತಪ್ಪ ರೈ ಅಭಿಮಾನಿ ಬಳಗದವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.

        ಸಮಾಜದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಲೇ ಇವೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆಯುತ್ತಿದ್ದು, ಸರ್ಕಾರಗಳು ಗಂಭಿರವಾಗಿ ಪ್ರಕರಣಗಳನ್ನು ಪರಿಗಣಿಸುತ್ತಿಲ್ಲವೆಂದು ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ

       ರಾಯಚೂರು ನಗರದ ಮಾಣಿಕಪ್ರಭು ಘಟ್ಟ ಪ್ರದೇಶದ ಉಸುಕಿನ ಹನುಮಪ್ಪ ದೇವಸ್ಥಾನದ ಹಿಂಬದಿಯ ಹೊಲಹೊಂದರಲ್ಲಿ ಹುಟ್ಟು ಹಬ್ಬದ ದಿನದಂದು ನಗರದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ಮಧು ಪತ್ತಾರ್ ರವರ ಶವವು ಮರದಲ್ಲಿ ಹರೆಬರೆ ಸುಟ್ಟ ಸ್ಥಿತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದು, ಪೊಲೀಸರು ಈ ಪ್ರಕರಣವನ್ನು ಶವ ಪತ್ತೆಯಾದ ಸ್ಥಳದಲ್ಲಿ ಸಿಕ್ಕ ಡೆತ್ ನೋಟ್ ಆಧಾರದ ಮೇಲೆ ನೇತಾಜಿ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಆತ್ಮಹತ್ಯೆ ಎಂದು ಕೇಸು ದಾಖಲಿಸಿಕೊಂಡಿರುತ್ತಾರೆ.

        ಆದರೆ ಈ ಸಾವಿನ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕ ವಲಯದಲ್ಲಿ ಉಂಟಾದ ಅನುಮಾನ, ಹೋರಾಟ ಹಾಗೂ ಪೋಷಕರು ನೀಡಿದ ದೂರಿನ ಮೇಲರೆಗೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವೆಂದು ದಾಖಲಿಸಿಕೊಂಡು ಸುದರ್ಶನ್ ಯಾದವ್ ಎಂಬ ಯುವಕನನ್ನು ಆರೋಪಿಯೆಂದು ಪರಿಗಣಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

       ಬಂಧಿತ ಆರೋಪಿ ಒಬ್ಬನಿಂದಲೇ ಇಂತಹ ಕ್ರೂರ ಕೃತ್ಯವನ್ನು ಮಾಡಲು ಅಸಾಧ್ಯ ಈತನ ಹಿಂದೆ ಇನ್ನು ಕೆಲವರು ಬಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಹಾಗೂ ಬಗ್ಗೆ ಸೂಕ್ತ ತನಿಖೆ ಮಾಡಿದಾಗ ಮಾತ್ರ ಈ ಹತ್ಯೆಯ ಹಿಂದಿನ ನಿಜವಾದ ಸಂಗತಿ ಹೊರಗೆ ಬರಲು ಸಾದ್ಯವೆಂದು ಸಂಘಟನೆ ಹೇಳಿದೆ

        ಜಿಲ್ಲಾಧ್ಯಕ್ಷ ಅರುಣ್‍ಕುಮಾರ್‍ಜಿಲ್ಲಾ ಗೌರವಾಧ್ಯಕ್ಷ ರಾಜೇಂದ್ರ.ಬಿ.ಜಿ. ಜಿಲ್ಲಾ ಕಾರ್ಯಧ್ಯಕ್ಷ ಮಂಜುನಾಥ್ ಸೇಸ್ ಉಪಾಧ್ಯಕ್ಷರು ರಾಜೇಶ್ ಮದರಿ ಪ್ರಧಾನ ಕಾರ್ಯದಶಿ ನಾಗರಾಜ್‍ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಉಪಾಧ್ಯಕ್ಷ ಗೋವಿಂದ ತಾಲ್ಲೂಕು ಅಧ್ಯಕ್ಷ ಸಂತೋಷ್ ತಾಲ್ಲೂಕು ಉಪಾಧ್ಯಕ್ಷ ಅಶೋಕ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link