ಮೇ ತಿಂಗಳ ಮಧ್ಯಭಾಗದಲ್ಲಿ ಸಿಬಿಎಸ್‌ಇ ಫಲಿತಾಂಶ…!!

ನವದೆಹಲಿ

      ಈ ವರ್ಷ ಹಲವಾರು ಕ್ರಮಗಳು ಮತ್ತು ಮುನ್ನೆಚ್ಚರಿಕೆಯೊಂದಿಗೆ ಬೋರ್ಡ್‌ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ), ಇದೀಗ ಮೌಲ್ಯಮಾಪನದ ಗುಣಮಟ್ಟ ಹೆಚ್ಚಿಸಲು ಸಜ್ಜಾಗಿದೆ

      ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಸಿಬಿಎಸ್‌ಇ ಡಾಕ್ಯುಮೆಂಟರಿ ಮತ್ತು ಪವರ್‌ಪಾಯಿಂಟ್‌ ಪ್ರೆಸೆಂಟೆಷನ್‌ ಅನ್ನು ಮೌಲ್ಯಮಾಪನ ತರಬೇತಿಯ ಭಾಗವಾಗಿಸಿದೆ ಮತ್ತು ಪ್ರಾಯೋಗಿಕ ಮೌಲ್ಯಮಾಪನವನ್ನು ಪ್ರಸ್ತುತಪಡಿಸಿದೆ.

      ತಪ್ಪಿಲ್ಲದಂತೆ ಮೌಲ್ಯಮಾಪನ ನಡೆಯಲಿದ್ದು, ದೇಶದಾದ್ಯಂತದ 3000 ಮೌಲ್ಯಮಾಪನ ಕೇಂದ್ರಗಳಿಗೆ ಈ ಸಂಬಂಧ ಸೂಚನೆ ನೀಡಲಾಗಿದೆ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್‌ ತ್ರಿಪಾಠಿ ಹೇಳಿದ್ದಾರೆ.

       ಬೋರ್ಡ್‌ನ ನಿರ್ದೇಶನಗಳನ್ನು ಅನುಸರಿಸದ ದಿಲ್ಲಿಯ 200 ಶಿಕ್ಷಕರ ಮೇಲೆ ಶಿಸ್ತುಬದ್ಧ ಕ್ರಮ ಜರುಗಿಸಲಾಗಿದೆ. ಪ್ರತಿ ಶಿಕ್ಷಕರಿಗೂ 50 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

      ಫೆ.15ರಿಂದ ಆರಂಭವಾದ ಬೋರ್ಡ್‌ ಪರೀಕ್ಷೆಗಳು ಇಂದು ಪೂರ್ಣಗೊಂಡಿವೆ. 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ ಮೇ ತಿಂಗಳ ಮಧ್ಯ ಅವಧಿಯಲ್ಲಿ ಹೊರಬೀಳಲಿದೆ ಎಂದು ತ್ರಿಪಾಠಿ ಹೇಳಿದ್ದಾರೆ.ಮೌಲ್ಯಮಾಪನ ಸುಧಾರಣೆಗಾಗಿ ಮಂಡಳಿ ಸುಮಾರು 2 ಲಕ್ಷ ಶಿಕ್ಷಕರಿಗೆ ಆನ್‌ಲೈನ್‌ ತರಬೇತಿಯೊಂದಿಗೆ ಹಲವಾರು ತೀವ್ರವಾದ ತರಬೇತಿ ಅವಧಿಗಳನ್ನು ನಡೆಸಿದೆ.

       ಒಟ್ಟಾರೆ 31,14,831 ಅಭ್ಯರ್ಥಿಗಳು ಬೋರ್ಡ್‌ ಪರೀಕ್ಷೆ ಬರೆದಿದ್ದು, 18,27,472 ವಿದ್ಯಾರ್ಥಿಗಳು 10ನೇ ತರಗತಿಯವರು. 12,87,359 ಜನ 12ನೇ ತರಗತಿ ವಿದ್ಯಾರ್ಥಿಗಳು. ದೇಶದಾದ್ಯಂತ ಸುಮಾರು 6 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap