ಸಿಸಿಬಿ ಖೆಡ್ಡಾಕ್ಕೆ ಬಿದ್ದ ಕ್ಯಾಟ್ ಮತ್ತು ಸತ್ಯ..!

ಬೆಂಗಳೂರು

   ಕೊಲೆ, ಕೊಲೆ ಯತ್ನ ಸೇರಿ ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಗಳಾದ ಸತ್ಯಗೌಡ ಅಲಿಯಾಸ್ ಸತ್ಯ ಹಾಗೂ ಮಂಜುನಾಥ್ ಸ್ವಾಮಿ ಅಲಿಯಾಸ್ ಕ್ಯಾಟ್ ಮಂಜನನ್ನು ಸಿಸಿಬಿ ಪೊಲೀಸರು ಗೂಂಡಾಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ನಾಗರಭಾವಿಯ ಮಾಳಗಾಳ ಸತ್ಯಗೌಡ ಅಲಿಯಾಸ್ ಸತ್ಯ ಕಳೆದ 4 ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಹಲವು ಬಾರಿ ಬಂಧಿತನಾದರೂ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೆ ರೌಡಿ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದ.ಈತನ ವಿರುದ್ಧ 2 ಕೊಲೆ ಯತ್ನ, 2 ಹಲ್ಲೆ, 1 ದರೋಡೆ ಸೇರಿದಂತೆ 7 ಪ್ರಕರಣಗಳು ದಾಖಲಾಗಿದ್ದು, ರೌಡಿ ಚಟುವಟಿಕೆಗಳನ್ನು ಮುಂದುವರೆಸುತ್ತ ಜನರಲ್ಲಿ ಭಯ-ಭೀತಿ ಉಂಟು ಮಾಡುತ್ತಿದ್ದ ಆತನನ್ನು ಗೂಂಡಾಕಾಯ್ದೆಯಡಿ ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

ಕ್ಯಾಟ್ ಮಂಜನ ಕೃತ್ಯ

       ಯಲಹಂಕದ ಅಗ್ರಹಾರ ಲೇಔಟ್‌ನ ರೌಡಿ ಕ್ಯಾಟ್ ಮಂಜ ಕಳೆದ 9 ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಹಲವು ಬಾರಿ ಜೈಲಿಗೆ ಹೋಗಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ರೌಡಿ ಚಟುವಟಿಕೆಗಳನ್ನು ಮುಂದುವರೆಸಿದ್ದ.

     ಆರೋಪಿಯ ವಿರುದ್ಧ 2 ಕೊಲೆ ಯತ್ನ, 2 ದರೋಡೆ, ಹಲ್ಲೆ, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ 7 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು,ಆರೋಪಿಯ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಗೂಂಡಾಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link