ಬೆಂಗಳೂರು
ಆನ್‌ಲೈನ್ ಪೋಕರ್ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಮುನಿರಾಜು (26), ಶಂಕರಪ್ಪ (46) ಮತ್ತು ಮುಹಮ್ಮದ್ ಜಾಬೀರ್ (46) ಬಂಧಿತ ಆರೋಪಿಗಳಾಗಿದ್ದು ಅವರಿಂದ ಎರಡು ಮೊಬೈಲ್, 1700 ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ
ಹೆಣ್ಣೂರು ಮುಖ್ಯರಸ್ತೆ ಲಿಂಗರಾಜಪುರ ಬಸ್ ನಿಲ್ದಾಣದ ಬಳಿ ಮೂವರು ಮೊಬೈಲ್ ಫೋನ್‌ನಲ್ಲಿ ಗ್ರೂಪ್ ಮಾಡಿಕೊಂಡು ಜೂಜಾಟ ನಡೆಸುತ್ತಿದ್ದಾರೆ. ಹಣ ಪಣವಾಗಿ ಕಟ್ಟಿಸಿಕೊಂಡು ಲೈಸನ್ಸ್ ಇಲ್ಲದೆ ಆನ್‌ಲೈನ್ ಪೋಕರ್ ಗೇಮ್ ಎಂಬ ಜೂಜಾಟದಲ್ಲಿ ತೊಡಗಿದ್ದರೆ ಎಂಬ ಖಚಿತ ಮಾಹಿತಿ ಪಡೆದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ವಿವೋ ಕಂಪನಿಯ ಎರಡು ಮೊಬೈಲ್ ಫೋನ್, 1700 ರೂ.ನಗದು ಹಣವನ್ನು ಪಶಪಡಿಸಿ ಕೊಳ್ಳಲಾಗಿದೆ .ಆರೋಪಿಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ವಿಚಾರಣೆಯ ವೇಳೆ, ಕಿಶೋರ್ ಎಂಬಾತ ಪಾರ್ಕಿಂಗ್ ಪ್ಲೇ ಆಪ್ ಮೂಲಕ ಪಂಟರ್‌ಗಳಿಂದ ಆನ್‌ಲೈನ್ ಪೋಕರ್ ಗೇಮ್ ನಡಸುತ್ತಿರುವುದು ಬೆಳಕಿಗೆ ಬಂದಿದ್ದು ಆತನ ಪತ್ತೆಗೆ ಬಲೆಬೀಸಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








