ಕರೋನಾ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಕಾರಣ

ಚಿತ್ರದುರ್ಗ

     ಇಡೀ ದೇಶದಲ್ಲಿ ಕೊರೋನಾ ಸೋಂಕು ತೀವ್ರತೆಗೆ ಕೇಂದ್ರ ಸರ್ಕಾರವೇ ಕಾರಣವೆಚಿದು ಕೆಪಿಸಿಸಿ ವಕ್ತಾರ ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್ ಟೀಕಿಸಿದ್ದಾರೆ.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡ ಕೆಲವು ತಪ್ಪು ನಿರ್ಧಾರಗಳಿಂದ ಕೊರೋನಾ ವೈರಸ್ ಹಾವಳಿ ಹೆಚ್ಚುತ್ತಿದೆ. ಪ್ರತಿ ನಿತ್ಯವೂ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಜನರಲ್ಲಿ ಆತಂಕ ಮೂಡಿಸಿದೆ.

     ಕೇಂದ್ರ ಸರ್ಕಾರ ಆರಂಭದಲ್ಲಿಯೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದರೆ ದೇಶಕ್ಕೆ ಇಂತಹ ಅಪಾಯ ಎದುರಾಗುತ್ತಿರಲಿಲ್ಲ ಎಂದು ಆರೋಪ ಮಾಡಿದ್ದಾರೆ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಣೆಗೆ ಮುನ್ನವೇ ಬಿಗಿ ಕ್ರಮ ಕೈಗೊಂಡಿದ್ದರೆ ಕೊರೋನಾ ಸೊಂಕು ಉಲ್ಬಣಗೊಳ್ಳುತ್ತಿರಲಿಲ್ಲ.

     ವಿಮಾನಗಳ ಹಾರಟವನ್ನು ತಕ್ಷಣವೇ ನಿಲ್ಲಿಸಿ ವಲಸೆ ಕಾರ್ಮಿಕರಿಗೆ ಸೌಲಬ್ಯ ಕೊಡಬೇಕಿತ್ತು. ರಾಜ್ಯದಲ್ಲಿಯೂ ಸಹ ಸರ್ಕಾರ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ವಾಹನಗಳ ಸಂಚಾರ, ವಾಣಿಜ್ಯ ವಹಿವಾಟು, ಮದ್ಯದಂಗಡಿಗೆ ಅನುಮತಿ ನೀಡಿರುವುದು ಸ್ಭೆರಿದಂತೆ ಕೆಲವು ತೀರ್ಮಾನಗಳಿಂದ ಪ್ರಕರಣ ಹೆಚ್ಚುತ್ತಿದೆ ಎಂದು ಬಾಲಕೃಷ್ಣಸ್ವಾಮಿ ಯಾದವ್ ಹೇಳಿದ್ದಾರೆ
ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿರುವ ಬೃಹತ್ ಮೊತ್ತದ ಪ್ಯಾಕೇಜ್‍ನ ಸೌಲಬ್ಯಗಳು ಯಾರಿಗೆ ಎಷ್ಟು ಪ್ರಮಾಣದಲ್ಲಿ ಸಿಗಲಿದೆ ಎಂಬುದರ ಬಗ್ಗೆ ಸ್ಪಷ್ಟವಾಗಿ ವಿವರಣೆ ನೀಡಿಲ್ಲ ಇದರಲ್ಲಿ ರಾಜ್ಯ ಸರ್ಕಾರಕ್ಕೆ ಎಷ್ಟು ಎಂದು ಎಂಬುದು ಸಹ ಮಾಹಿತಿ ನೀಡಿಲ್ಲ. ಇದೊಂದು ಪೊಳ್ಳು ಭರವಸೆಯ ಪ್ಯಾಕೇಜ್ ಆಗಿದೆ ಎಂದು ಅವರು ಆರೋಪಿಸಿದ್ದಾರೆ

     ಕೊರೋನಾ ಹಿನ್ನಲೆಯಲ್ಲಿ ವಿವಿಧ ವರ್ಗದ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಾದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೂ ತೀವ್ರ ತೊಂದರೆಯಾಗಿದೆ. ಕಮ್ಮಾರರು, ಟೈಲರ್‍ಗಳು, ಇತರೆ ವರ್ಗಗಳ ಕಾರ್ಮಿಕರಿಗೂ ಸೌಲಬ್ಯ ನೀಡಬೇಕು ಎಂದು ಆಗ್ರಹಿಸಿದ್ದಾರೆ

     ಹಿಂದಿನ ಕಾಂಗ್ರೆಸ್ ಸರ್ಕಾರ ವರದಕ್ಷಿಣೆ ಕಿರುಕುಳ ಕೌಟುಂಬಿಕ ದೌರ್ಜನ್ಯ ಲೈಂಗಿಕುಳಕ್ಕೊಳಗಾದ ಮಹಿಳೆಯರಿಗಾಗಿ ಸ್ಥಾಪಿಸಿದ್ದ ಮಹಿಳಾ ಸಾಂತ್ವಾನ ಕೇಂದ್ರಗಳನ್ನು ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಮುಚ್ಚಲು ಹೊರಟಿರುವುದು ಸರಿಯಲ್ಲ. ಈ ಕೇಂದ್ರಗಳಲ್ಲಿ ಸಾವಿರಾರು ಮಂದಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಇವುಗಳನ್ನು ಮುಚ್ಚುವ ಕ್ರಮ ಕೈಗೊಂಡರೆ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link