ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಹೆಚ್.ಕೆ.ಪಾಟೀಲ್

ಹರಪನಹಳ್ಳಿ:

    ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ, ಮಹದಾಯಿ ಯೋಜನೆ ನೆನಗುದಿ, ನೆರೆ ಪರಿಹಾರಕ್ಕೆ ಅರೆ ಕಾಸಿನ ಮಜ್ಜಿಗೆ ನೀಡಿದೆ, ಮಂತ್ರಿಮಂಡಲ ವಿಸ್ತರಣೆಗೆ ಮೀನ ಮೇಷದ ಮೂಲಕ ಮೌನ ವಹಿಸುತ್ತಿರುವ ಕೇಂದ್ರ ನಾಯಕರು ರಾಜ್ಯಕ್ಕೆ ಅವಮಾನಿಸುತ್ತಿದ್ದಾರೆ ಎಂದು ಹೆಚ್.ಕೆ.ಪಾಟೀಲ್ ದೂರಿದರು.

    ಪಟ್ಟಣದಲ್ಲಿ ಸೋಮವಾರ ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ್ ನಿವಾಸಕ್ಕೆ ಬೇಟಿ ನೀಡಿದಾಗ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಇಚ್ಚೆ ಇರದ ಪರಿಣಾಮ ಎನೋ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಮೋದಿ ಅವರಿಗೆ ಯಡಿಯೂರಪ್ಪ ವೇದಿಕೆಯಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ನೀಡಿ ಎಂದು ಮನವಿ ಮಾಡಿದರೂ ಕ್ಯಾರೇ ಎನ್ನಲಿಲ್ಲ.

    ಇನ್ನೂ ಯಡಿಯೂರಪ್ಪ ರಾಜ್ಯಕ್ಕೆ ಪೂರ್ಣ ಪ್ರಮಾಣದ ಮಂತ್ರಿ ಮಂಡಲ ನೀಡಲಾಗುತ್ತಿಲ್ಲ. ಈಗಿರುವ ಸಚಿವರಿಗೂ ಸ್ವತಂತ್ರವಾಗಿ ಖಾತೆ ನಿರ್ವಹಣಗೆ ಅಧಿಕಾರ ನೀಡಿಲ್ಲ. ಮಂತ್ರಿ ಮಂಡಲ ವಿಸ್ತರಣೆ ಸಂಕ್ರಾತಿ, ಜ.26 ಮುಂದೆ ಯುಗಾದಿಗೂ ಮುಂದೂಡುತ್ತಾರೆ. ಈ ರೀತಿ ಆಡಳಿತ ಮಾಡಿದರೆ ರಾಜ್ಯದ ಪ್ರಗತಿಗೆ ಬಿಜೆಪಿ ಸರ್ಕಾರಗಳು ಮಾರಕವಾಗುತ್ತಿವೆ ಎಂದರು.

   ದೇಶದ ಅರ್ಥಿಕ ಪರಿಸ್ಥಿತಿ ಅಧೋಗತಿಗೆ ಕುಸಿಯುತ್ತಿರುವ ಅನಾಹುತವನ್ನು ಸಾರ್ವಜನಿಕರು ಗಮನ ಹರಿಸಬಾರದೆಂದು ಜನರ ಮನಸ್ಸನ್ನ ಭಾವನಾತ್ಮಕ ಚಟುವಟಿಕೆಗಳತ್ತಾ ಕೇಂದ್ರಿಕರಿಸಲು ರಾಜಕೀಯ ದಾಳಗಳನ್ನು ಕೇಂದ್ರ ಸರ್ಕಾರ ಉರಿಳಿಸುತ್ತಿದೆ. ಹದಗೆಟ್ಟ ಅರ್ಥಿಕ ನೀತಿಯನ್ನು ಸರಿಪಡಿಸಲು ಚಡಪಡಿಸುತ್ತಿರುವ ಕೇಂದ್ರ ಸರ್ಕಾರ ಇಲ್ಲಸಲ್ಲದ ಕಾನೂನುಗಳನ್ನು ತಿದ್ದುಪಡಿ ಮಾಡಿ ದೇಶದ ಶಾಂತಿಯನ್ನು ಕದಡುತ್ತಿದೆ. ದೇಶಕ್ಕೆ ಅನ್ಯಾಯ ಮಾಡುತ್ತಿದೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಮುಖಂಡರಾದ ಸಿ.ಚಂದ್ರಶೇಖರಭಟ್, ಶಶಿಧರ ಪೂಜಾರ, ಜಿ.ಪಂ.ಸದಸ್ಯ ಹೆಚ್.ಬಿ.ಪರಶುರಾಮಪ್ಪ, ಪುರಸಭೆ ಸದಸ್ಯರಾದ ಸರಖಾವಸ್ ಜಾಕೀರ, ಲಾಟಿ ದಾದು, ಭರತೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ರಾಜಶೇಖರ, ಹೆಚ್.ಕೆ.ಹಾಲೇಶ್, ಮಾಜಿ ಸದಸ್ಯರಾದ ಅರುಣ ಪೂಜಾರ, ಜಾವೀದ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎಲ್.ಪೋಮ್ಯನಾಯ್ಕ್, ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ನಿರ್ದೇಶಕರಾದ ದಂಡಿನ ಹರೀಶ್, ಗಿಡ್ಡಹಳ್ಳಿ ನಾಗರಾಜ, ಮುಖಂಡರಾದ ಸಾಬಳ್ಳಿ ಜಂಬಣ್ಣ, ನೀಲಗುಂದ ವಾಗೀಶ್, ಶಿವಕುಮಾರ ನಾಯ್ಕ್, ಉಮಾಕಾಂತ, ಪರಶುರಾಮ, ಎಸ್.ಕೆ.ಖಲಿದ್, ಶಂಬಣ್ಣ ಹಾಗೂ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap