ನೆಹರು ತತ್ವಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟ ಕೇಂದ್ರ ಸರ್ಕಾರ : ವೀರಪ್ಪ ಮೊಯ್ಲಿ

ಬೆಂಗಳೂರು   ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಿದ್ಧಾಂತ, ಅವರ ವ್ಯಕ್ತಿತ್ವವನ್ನು ಅಳಿಸಿ ಹಾಕುವ ಹುನ್ನಾರ ನಡೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಕರೆ ನೀಡಿದ್ದಾರೆ.

   ನೆಹರು ಅನುಷ್ಠಾನಕ್ಕೆ ತಂದಿದ್ದ ಯೋಜನಾ ಆಯೋಗದ ತತ್ವಸಿದ್ಧಾಂತಗಳಿಗೆ ತಿಲಾಂಜಲಿ ನೀಡಲಾಗಿದೆ. ರಾಷ್ಟ್ರೀಯತೆಯನ್ನು ಮತೀಯತೆ ಮತ್ತು ಜಾತಿಯತೆ ಜೊತೆ ಕೊಂಡೊಯ್ಯುವುದಕ್ಕೆ ತದ್ವಿರುದ್ಧವಾದ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು .ನಗರದ ಆರ್‌ವಿ ಟೀಚರ್ ಕಾಲೇಜು ಸಭಾಂಗಣದಲ್ಲಿ ಕೆಪಿಸಿಸಿ ಗುರುವಾರ ಆಯೋಜಿಸಿದ್ದ ಜವಾಹರಲಾಲ್ ನೆಹರು ಅವರ 130ನೇ ಜನ್ಮದಿನದ ಅಂಗವಾಗಿ ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿ ಮತೀಯ ಗೊಂದಲವನ್ನು ಉಂಟು ಮಾಡಿ ಮೌಲ್ಯಗಳನ್ನು ನಾಶ ಪಡಿಸುವ ಪ್ರಯತ್ನಗಳು ಆಗ್ಗಿಂದಾಗ್ಯೆ ನಡೆಯುತ್ತಲೇ ಇದೆ ಎಂದು ಆರೋಪಿಸಿದರು.

     ದೇಶ ಭಕ್ತ, ಭಗತ್‌ಸಿಂಗ್ ಅವರೇ ನೆಹರು ಅವರನ್ನು ಯುಗಪುರುಷ ಎಂದು ಬಣ್ಣಿಸಿದ್ದಾರೆ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು .ವೈಜ್ಞಾನಿಕವಾಗಿ ದೇಶದ ನೆಲೆಗಟ್ಟನ್ನು ಕಟ್ಟಿಕೊಳ್ಳಬೇಕು. ಆರ್ಥಿಕ, ಸಾಮಾಜಿಕ ಚೈತನ್ಯಕ್ಕೆ ಶಿಕ್ಷಣ ಪ್ರಮುಖ ಸಾಧನ ಎಂದು ನೆಹರು ಹೇಳಿದ್ದರು. ವಿಜ್ಞಾನ ಸಮಾಜ ಮಿತ್ರ ಎಂದು ನೆಹರು ನಂಬಿದ್ದರೆ, ಮೋದಿ ಕಾಲದಲ್ಲಿ ಅದು ವಿಜ್ಞಾನ ಸಮಾಜದ ಶತೃವಾದದಂತಾಗಿದೆ ಎಂದರು.

      ಮಹಾತ್ಮಗಾಂಧೀಜಿಯವರನ್ನು ಹತ್ಯೆ ಮಾಡಿದಾಗ ಗೋಡ್ಸೆ, ಆರ್‌ಎಸ್‌ಎಸ್ ಹೆಸರು ಕೇಳಿ ಬಂದಿತು. ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಆರ್‌ಎಸ್‌ಎಸ್ ನನ್ನೇ ನಿಷೇಧಿಸಬೇಕು ಎಂದು ಮುಂದಾದರು. ಆಗ ಅದಕ್ಕೆ ತಡೆ ಹಾಕಿದವರೇ ನೆಹರು ಎಂದು ಮೊಯಿಲಿ ಹೇಳಿದರು.
ಮಾಜಿ ಸಚಿವ ಬಿ.ಎಲ್. ಶಂಕರ್ ಅವರು ಮಾತನಾಡಿ, ನೆಹರು ಅವರು ಪ್ರಜಾಪ್ರಭುತ್ವದಲ್ಲಿ ಗಟ್ಟಿಯಾದ ನಂಬಿ ಹೊಂದಿದ್ದರು.

     ಒಂದು ಬಾರಿ ತಾವು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಹೋದಾಗ ಅವರದೇ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯಾಗಿದ್ದ ಯುವಕರೊಬ್ಬರ ಬಗ್ಗೆ ತಿಳಿದು ಕೊಂಡರು. ಅವರ ಪ್ರಚಾರ ಮಾಡುತ್ತಿದ್ದ ಭಾಗದಲ್ಲಿ ನೆಹರುರವರು ಪ್ರಚಾರಕ್ಕೆ ಹೋಗಲಿಲ್ಲ. ಆಗ ಅಲ್ಲಿ ಆ ಯುವಕನೇ ಎದ್ದು ಬಂದ. ಯುವಕನೇ ಅಟಲ್ ಬಿಹಾರಿ ವಾಜಪೇಯಿ ಸಂಸದೀಯ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ಇರಬೇಕು. ಉತ್ತಮ ಸಂಸದೀಯ ಪಟುಗಳು ಇರಬೇಕು ಎಂದು ಬಲವಾಗಿ ನಂಬಿದ್ದರು ಎಂದರು.

    ಒಮ್ಮೆ ಲೋಕಸಭೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಂದು ಗಂಟೆಗಳ ಕಾಲ ಭಾಷಣಮಾಡಿದಾಗ ಅವರು ಮುಂದೊಂದು ದಿನ ಪ್ರಧಾನಿಯಾಗುತ್ತಾರೆ ಎಂದು ಉದಾರತೆಯಿಂದ ಹೇಳಿದರು. ಇದು ನೆಹರು ಅವರಿಗೆ ಇದ್ದ ಪ್ರಜಾಪ್ರಭುತ್ವದ ಮೇಲಿನ ಗೌರವ ಎಂದು ಬಿ.ಎಲ್. ಶಂಕರ್ ಬಣ್ಣಿಸಿದರು.

    ತಿನ್ ಮೂರ್ತಿ ಭವನವನ್ನು ಬದಲಾಯಿಸಿ ಅಲ್ಲಿ ಎಲ್ಲಾ ಪ್ರಧಾನಿಗಳ ಸ್ಮರಣೀಯ ಭವನವನ್ನಾಗಿಸುವ ಪ್ರಯತ್ನವನ್ನು ನಡೆಸುವ ಮೂಲಕ ಕೇಂದ್ರ ಸರ್ಕಾರ ನೆಹರು ಅವರು ಇರಲೇ ಇಲ್ಲ ಎಂಬ ಹುನ್ನಾರವನ್ನು ನಡೆಸುತ್ತಿದೆ ಎಂದು ಆರೋಪಿಸಿದರು.ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಎಚ್.ಎಂ. ರೇವಣ್ಣ, ಮತ್ತಿತರರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link
Powered by Social Snap