ಕೋಲಾರ
ಕೇಂದ್ರ ಸರ್ಕಾರ ಹೆಳಿದಂತೆ ಬಜೆಟ್‌ನಲ್ಲಿ ಎಲ್ಲಾ ರಾಜ್ಯಗಳಿಗೂ ಸಮಪಾಲು ನೀಡಿಲ್ಲಾ ಎಂಬುದು ನಿಧಾನವಾಗಿ ಬೆಳಕಿಗೆ ಬರುತ್ತಿದೆ .ಕೊಲಾರಕ್ಕೆ ಮಂಜೂರಾಗಿದ್ದ ರೈಲ್ವೆ ಕೋಚ್ ಫ್ಯಾಕ್ಟರಿಯನ್ನು ಕೇಂದ್ರ ಸ್ಥಳಾಂತರಿಸುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದು ಇದರಿಂದಾಗಿ ಸುಮಾರು 3 ಸಾವಿರ ಉದ್ಯೋಗಳನ್ನು ಕಿತ್ತುಕೊಂಡಿದೆ. ಕೋಲಾರ ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿದ್ದ ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ.
ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದರು. ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ನೀಡಿದ ಅನುದಾ, ಹೊಸ ಯೋಜನೆಗಳ ಕುರಿತ ಮಾಹಿತಿ ಈಗ ಬಹಿರಂಗವಾಗಿದೆ.ಕೋಲಾರದಲ್ಲಿ ರೈಲ್ವೆ ರಿಪೇರಿ ವರ್ಕ್ ಶಾಪ್ ನಿರ್ಮಾಣಕ್ಕೆ 495.3 ಕೋಟಿ ರೂ. ಹಣವನ್ನು ಬಜೆಟ್‌ನಲ್ಲಿ ನೀಡಲಾಗಿದೆ. ಈ ವರ್ಕ್‌ಶಾಪ್‌ನಿಂದ 2 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.