ವಿ ಆರ್ ಎಸ್ : ಶ್ವೇತ ಪತ್ರಕ್ಕಾಗಿ BSNL ನೌಕರರ ಉಪವಾಸ ಸತ್ಯಾಗ್ರಹ

ಬೆಂಗಳೂರು

    ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳ ನೌಕರರ ಸ್ವಯಂ ನಿವೃತ್ತಿ ಯೋಜನೆಯ (ವಿಆರ್‌ಎಸ್) ಸತ್ಯಾಂಶ ಕುರಿತು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿ ನೌಕರರು ನಗರದಲ್ಲಿ ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

   ಎಂಜಿ ರಸ್ತೆ ಬಿಎಸ್‌ಎನ್‌ಎಲ್ ಕಚೇರಿ ಆವರಣದಲ್ಲಿ ಬಿಎಸ್‌ಎನ್‌ಎಲ್‌ಇಯು, ಬಿಟಿಇಯು, ಎಫ್‌ಎನ್ ಟಿಒ ಸೇರಿದಂತೆ ವಿವಿಧ ಸಂಘಟನೆ ಗಳ ನೇತೃತ್ವದಲ್ಲಿ ನೂರಾರು ನೌಕರರು ಸೇರಿ ಉಪವಾಸ ಸತ್ಯಾಗ್ರಹ ಕೈಗೊಂಡು ವಿಆರ್‌ಎಸ್ ಸತ್ಯಾಂಶ ಕುರಿತು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

   ವಿಆರ್‌ಎಸ್ ಕೊಟ್ಟ ನಂತರ ಮುಂದೆ ವೈಯಕ್ತಿಕವಾಗಿ ತನಗೆ ಎಷ್ಟು ಆರ್ಥಿಕ ನಷ್ಟವುಂಟಾಗುತ್ತದೆ ಎಂಬ ಅರಿವು ಇಲ್ಲದೆ, ನೌಕರರು ನಿವೃತ್ತಿ ಯೋಜನೆಗೆ ಮುಂದಾಗುತಿದ್ದಾರೆ.ಅಷ್ಟೇ ಅಲ್ಲದೆ, ನಿವೃತ್ತಿ ಯೋಜನೆಗೆ ಸಂಬಂಧಪಟ್ಟ ಹಲವು ಅಂಶಗಳನ್ನು ಈಡೇರಿಸದೆ, ಬಿಎಸ್‌ಎನ್‌ಎಲ್ ನ ಅಧಿಕಾರಿಗಳು ನೌಕರರ ಮೇಲೆ ಬಲವಂತದ ಒತ್ತಡ ಹೇರುತಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.

  ಪೆನಷನ್ ಕಮ್ಯೂಟೇಶನ್, ಮೂರನೇ ವೇತನ ಪರಿಷ್ಕರಣೆ, ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ, ಮುಂತಾದ ವಿಷಯಗಳ ಒಟ್ಟಿಗೆ, ನಿವೃತ್ತಿ ತೆಗೆದುಕೊಳ್ಳದೇ ಉಳಿಯುವ ನೌಕರರಿಗೆ ವರ್ಗಾವಣೆ ಮತ್ತು ಅವರು ಹೆಚ್ಚು ಕೆಲಸ ಮಾಡಬೇಕಾಗುತ್ತದೆ ಎನ್ನುವ ಭಯದ ಮಾತುಗಳನ್ನು ಹೇಳುತ್ತಾ, ಹೆಚ್ಚು ಹೆಚ್ಚು ನೌಕರರು ನಿವೃತ್ತಿ ಯೋಜನೆಗೆ ಸಹಿ ಹಾಕುವ ಹಾಗೆ ಸರ್ಕಾರ ಸಂಚು ರೂಪಿಸಿದೆ ಎಂದರು.

    ಧರಣಿಯನ್ನುದ್ದೇಶಿಸಿ ಮಾತನಾಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ಪಿ.ಅಭಿಮನ್ಯು,ಮೂರನೇ ವೇತನ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆ ಯ ಸೌಲಭ್ಯಗಳು ನಿವೃತ್ತಿ ಯೋಜನೆಗೆ ಸಹಿ ಹಾಕಿದವರಿಗೆ ಲಭ್ಯವಿಲ್ಲ ಎಂದಾದಲ್ಲಿ, ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.ಇಂತಹ ಹಲವು ಅಂಶಗಳ ಮೇಲೆ, ತುರ್ತಾಗಿ ಸ್ಪಷ್ಟೀಕರಣ ಕೊಡಬೇಕು.ಇಲ್ಲದಿದ್ದರೆ, ನಾವು ನಮ್ಮ ನೌಕರರಿಗೆ ನಿವೃತ್ತಿ ಯೋಜನೆಯಿಂದ ಹಿಂದೆ ಸರಿಯುವಂತೆ ತಾಕೀತು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link