ತುಮಕೂರು : ಗಡಿ ಭಾಗದ ಚೆಕ್‍ಪೋಸ್ಟ್‍ಗಳಿಗೆ ಜಿ.ಪಂ ಸಿಇಓ ಭೇಟಿ

ತುಮಕೂರು

    ತುಮಕೂರು ಜಿಲ್ಲೆಯ ಕುಣಿಗಲ್, ತುರುವೇಕೆರೆ ತಾಲೂಕಿನ ಗಡಿಗಳಾದ ಜೋಡುಕಟ್ಟೆ, ಕಲ್ಲುನಾಗತೀಹಳ್ಳಿ, ಹಂಚಿಹಳ್ಳಿ, ಅಂಚೇಪಾಳ್ಯ ಪ್ರದೇಶಗಳಿಗೆ ಕೋವಿಡ್-19 ನಿಯಂತ್ರಣ ಕುರಿತು ಗಡಿ ಪ್ರದೇಶದ ಚೆಕ್‍ಪೋಸ್ಟ್‍ಗಳಲ್ಲಿ ಕೈಗೊಳ್ಳಲಾಗುತ್ತಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಏಪ್ರಿಲ್ 28 ರಂದು ರಾತ್ರಿ 9-30 ಗಂಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕಾರ್ಯನಿರತ ಪೋಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಂದ ತಪಾಸಣಾ ಕಾರ್ಯ ವೈಖರಿಯ ಮಾಹಿತಿ ಪಡೆದು, ಚೆಕ್‍ಪೋಸ್ಟ್‍ಗಳಿಂದ ಹೋಗುವ/ಬರುವ ವಾಹನಗಳ ಸಂಖ್ಯೆ, ದೂರವಾಣಿ ಸಂಖ್ಯೆ ಹಾಗೂ ಉದ್ದೇಶಗಳ ಬಗ್ಗೆ ರಿಜಿಸ್ಟರ್‍ನಲ್ಲಿ ದಾಖಲು ಮಾಡಿ ಸುಬಾಹು ತಂತ್ರಾಂಶದಲ್ಲಿ ಅಳವಡಿಸಲು ಕ್ರಮ ಜರುಗಿಸುವಂತೆ ಸೂಚಿಸಿದರು.

    ಚೆಕ್‍ಪೋಸ್ಟ್‍ಗಳಲ್ಲಿ ಕರ್ತವ್ಯನಿರತ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸೂಚಿಸಿದರು.  ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿಯ ಟಾಸ್ಕ್‍ ಪೋರ್ಸ್ ಸಮಿತಿಯು ಕಲ್ಲುನಾಗತೀಹಳ್ಳಿ ಗ್ರಾಮದ ಗಡಿಯಲ್ಲಿ ನಾಗಮಂಗಲ ತಾಲ್ಲೂಕಿನಿಂದ ಅಡ್ಡದಾರಿಯಲ್ಲಿ ಬರುವ ಜನರನ್ನು ವ್ಯವಸ್ಥಿತವಾಗಿ ನಿಗಾವಹಿಸುವಂತೆ ಸಿಬ್ಬಂದಿಯವರಿಗೆ ಸೂಚಿಸಿದರು.

    ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳು, ತಿಪಟೂರು ಉಪವಿಭಾಗದ ತಹಶೀಲ್ದಾರ್, ತುರುವೇಕೆರೆ ತಾಲ್ಲೂಕು, ಕಾರ್ಯನಿರ್ವಾಹಕ ಅಧಿಕಾರಿ, ತುರುವೇಕೆರೆ ಹಾಗೂ ಡಿ.ವೈ.ಎಸ್.ಪಿ. ತುರುವೇಕೆರೆ ರವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link